ಸಮರಸ ಚಿತ್ರ ಸುದ್ದಿ: ಕುಂಬಳೆ: ನಾಯ್ಕಾಪು ಶ್ರೀವನ ಶಾಸ್ತಾರ ದೇವರ ಸನ್ನಿಧಿಯಲ್ಲಿ ನಡೆಯುತ್ತಿರುವ ಭಜನ ಸಪ್ತಾಹಕ್ಕೆ ನಾರಾಯಣಮಂಗಲ ಶ್ರೀಮಹಾವಿಷ್ಣು ದೇವರ ಸನ್ನಿಧಿಯಿಂದ ಮಹಾವಿಷ್ಣು ಮಹಿಳಾ ಭಜನಾ ಸಂಘದ ಆಶ್ರಯದಲ್ಲಿ ಗುರುವಾರ ಸಂಜೆ ಹೊರೆಕಾಣಿಕೆ ಮೆರವಣಿಗೆ ಆಗಮಿಸಿತು.ನೂರಾರು ಮಂದಿ ಭಜಕರು ಭಾಗವಹಿಸಿದ್ದರು.
ಸಮರಸ ಚಿತ್ರ ಸುದ್ದಿ: ಮಹಾವಿಷ್ಣು ಮಹಿಳಾ ಭಜನಾ ತಂಡದವರಿಂದ ನಡೆದ ಭಜನಾ ಸಂಕೀರ್ತನದ ವೇಳೆ ಕುಂಬಳೆ ಗ್ರಾ.ಪಂ. ಸದಸ್ಯೆ ಪ್ರೇಮಲತ ಗಟ್ಟಿ ಅವರು ಭಜನ ತಂಡದವರಿಗೆ ತಿಲಕವಿಟ್ಟು ಸ್ವಾಗತಿಸುತ್ತಿರುವುದು.