ಪೆರ್ಲ:ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು 'ಸಾಧಕರೊಂದಿಗೆ ಸಂವಾದ' ಕಾರ್ಯಕ್ರಮದ ಭಾಗವಾಗಿ ಊರ ಪ್ರತಿಭೆ ಶಾಲೆಯ ಹಿರಿಯ ವಿದ್ಯಾರ್ಥಿ ಸ್ವರ್ಗ ಸೂರಂಬೈಲುಕಟ್ಟೆಯ ಭವಾನಿಶಂಕರ ಆಚಾರ್ಯ ಅವರ ಮನೆಗೆ ಭೇಟಿ ಮಾಡಿ ಹೂಗುಚ್ಛ ನೀಡಿ ಗೌರವಿಸಿದರು.
ಕೆತ್ತನೆ ಕೆಲಸದ ತ್ಯಾತ್ಯಕ್ಷಿಕೆ ನೀಡಿ ಭವಾನಿ ಶಂಕರ್ ಮಾತನಾಡಿ, ಬಾಲ್ಯದಲ್ಲಿ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದು ಕಲೆಯ ಬಗೆಗಿನ ಆಸಕ್ತಿಗೆ ನೀರುಣಿಸಿ ಪೆÇೀಷಿಸಿದ ಸ್ವರ್ಗ ಶಾಲೆಯ ಅಧ್ಯಾಪಕರ ಪೆÇ್ರೀತ್ಸಾಹ, ಶಾಲಾ ದಿನಗಳಲ್ಲಿ ಉಪಜಿಲ್ಲೆ, ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಲಭಿಸಿರುವುದನ್ನು, ಸಂಘ ಸಂಸ್ಥೆಗಳು ಗೌರವಿಸಿರುವುದನ್ನು ಸ್ಮರಿಸಿದರು.
ಪದವಿ ಶಿಕ್ಷಣದ ಬಳಿಕ ಕಾರ್ಕಳದ ಸಿ.ಇ.ಕಾಮತ್ ಸಂಸ್ಥೆಯಲ್ಲಿ ಒಂದೂವರೆ ವರ್ಷ ಬೆಳ್ಳಿ ಮತ್ತು ಹಿತ್ತಾಳೆ ಕೆತ್ತನೆ ತರಬೇತಿ ಪಡೆದು ಪೆÇಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಕಲ್ಲಡ್ಕ ರಾಮ ಮಂದಿರ, ತಲಪ್ಪಾಡಿ, ಶಿರಾಲಿ, ಸಾಗರಗಳಲ್ಲಿ ದೇವರ ಕಿರೀಟ, ಮಂಟಪ, ಪಲ್ಲಕ್ಕಿ, ಗರ್ಭಗುಡಿ ಕೆಲಸಗಳು, ಭೂತಾರಾಧನೆಯ ಮೊಗ, ಆಭರಣಗಳನ್ನು ನಿರ್ಮಿಸಿರುವುದಾಗಿ, ಕೆತ್ತನೆಯಲ್ಲಿ 8 ವರ್ಷಗಳ ಅನುಭವವಿದ್ದು ಪ್ರಸ್ತುತ ಮನೆಯಲ್ಲೇ ಕರಕುಶಲ ಕುಸುರಿ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.
ಕರ ಕುಶಲ ವೃತ್ತಿಯಲ್ಲಿ ತಾಳ್ಮೆ ಸೂಕ್ಷ್ಮತೆ, ನಾಜೂಕು, ನಿಖರತೆ, ಕೆಲಸಗಳಲ್ಲಿ ಶ್ರದ್ಧೆ ಅತೀ ಮುಖ್ಯ.ಸ್ವರ್ಗ ಶಾಲೆಯಲ್ಲಿ ಅಧ್ಯಾಪಕರು ಚಿತ್ರಕಲೆಗೆ ನೀಡಿದ ಪೆÇ್ರೀತ್ಸಾಹ ಹಾಗೂ ಸ್ಪೂರ್ತಿಯಿಂದ ಈ ಕ್ಷೇತ್ರದಲ್ಲಿ ಮುಂದುವರಿಯಲು ಸಾಧ್ಯವಾಗಿದೆ.ಮಕ್ಕಳು ಅವರವರ ಆಸಕ್ತಿ, ಅಭಿರುಚಿ, ಮನೋಭಿಲಾಷೆಗೆ ಹೊಂದಿಕೊಂಡು ಇಷ್ಟದ ಕ್ಷೇತ್ರವನ್ನು ಆರಿಸಿ ಜೀವನದಲ್ಲಿ ಯಶಸ್ಸು ಪಡೆಯುವಂತೆ ಹಾರೈಸಿದರು.ಮುಖ್ಯ ಶಿಕ್ಷಕಿ ಗೀತಾಕುಮಾರಿ ಬಿ. ನೇತೃತ್ವ ವಹಿಸಿದ್ದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀಧರ ಪೂಕರೆ, ಶಿಕ್ಷಕಿ ಗೀತಾಂಜಲಿ, ಕಲಾವತಿ ಉಪಸ್ಥಿತರಿದ್ದರು.