HEALTH TIPS

ಅಖಿಲ ಭಾರತ ಮೊದಲ ಮಕ್ಕಳ ಸಾಹಿತ್ಯ ಸಂಗಮದಲ್ಲಿ ಮಿಂಚಿದ ಗಡಿನಾಡ ಪ್ರತಿಭೆಗಳು

     ಪೆರ್ಲ: ಕರ್ನಾಟಕ ಮಕ್ಕಳ ಸಾಹಿತ್ಯ ಪರಿಷತ್ತು, ಮಕ್ಕಳ ಸಾಹಿತ್ಯ ಸಂಗಮ ಹಾಗೂ ಆದಿ ಚುಂಚನಗಿರಿ ಮಹಾಸಂಸ್ಥಾನ ಹಾಸನದ ನೇತೃತ್ವದಲ್ಲಿ ಶುಕ್ರವಾರ ಹಾಗೂ ಶನಿವಾರ ಹಾಸನದಲ್ಲಿ ಎರಡು ದಿನಗಳ ಅಖಿಲ ಭಾರತ ಕನ್ನಡ ಮಕ್ಕಳ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಸವಿ ಹೃದಯದ ಕವಿ ಮಿತ್ರರು ವೇದಿಕೆ ಪೆರ್ಲ ಕಾಸರಗೋಡು ಪ್ರಾಯೋಜಕತತ್ವದಲ್ಲಿ ಗಡಿನಾಡು ಕಾಸರಗೋಡಿನ ಏಳು ಮಂದಿ ಬಾಲ ಪ್ರತಿಭೆಗಳು ಭಾಗವಹಿಸಿದರು.
    ಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿದ್ದ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ಕಾಟುಕುಕ್ಕೆಯ ಸೃಷ್ಟಿ ಕೆ.ಶೆಟ್ಟಿ ವಹಿಸಿದ್ದು ವಿಶೇಷತೆಯಾಗಿತ್ತು. ಜೊತೆಗೆ ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಬಹುಮುಖ ಪ್ರತಿಭೆ ಮುಳ್ಳೇರಿಯದ ಅನೂಪ್‍ರಮಣ ಶರ್ಮ ಕಾರ್ಯಕ್ರಮ ನಿರ್ವಹಣೆ ಮತ್ತು ಸಾಂಸ್ಕøತಿಕ ಪ್ರದರ್ಶನದಲ್ಲಿ ವಿಶೇಷ ನಿರ್ವಹಣೆಯ ಮೂಲಕ ಗಮನ ಸೆಳೆದನು.
   ಸೃಷ್ಟಿ ಕೆ.ಶೆಟ್ಟಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಮಕ್ಕಳ ಸೃಜನಶೀಲತೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಎಂಬ ವಿಷಯದ ವಿಚಾರಗೋಷ್ಠಿಯಲ್ಲಿ ಮಸಾಪ ವಿಜಯಪುರ ಜಿಲ್ಲಾಧ್ಯಕ್ಷ ಜಂಭುನಾತ ಕಂಚ್ಕಾಣಿ ಸಮನ್ವಯಕಾರರಾಗಿದ್ದರು. ಐಶ್ವರ್ಯ ಹಾಸನ ಅವರು ಮೂಢನಂಬಿಕೆ ಮತ್ತು ಆಚರಣೆ ವಿಷಯದಲ್ಲಿ ಹಾಗೂ  ಪ್ರಹ್ಲಾದ್ ಮೂಡಬಿದ್ರೆ  ವಿಷಯಮಂಡನೆ ನಡೆಸಿದರು. ಚನ್ನರಾಯಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮನಾಥ ಎನ್.ಜೆ., ಮಂಡ್ಯ ಮಹಾನಗರ ಪಾಲಿಕೆ ಅಧ್ಯಕ್ಷ ಮಂಜುನಾಥ್, ನವಿಲೆ ಅಣ್ಣಪ್ಪ, ಪಾರ್ವತಿ ಸೋನಾರೆ, ಶರಣಪ್ಪ ಭೀಮರಾಯ ಘುಲಾರಿ ಮೊದಲಾದವರು ಉಪಸ್ಥಿತರಿದ್ದರು.
      ಮಕ್ಕಳ ಕವಿಗೋಷ್ಠಿಯಲ್ಲಿ ಪ್ರಿಯಾ ಎಸ್.ಸಾಯ, ಅಭಿ ಪೆರ್ಲ, ಪೃಥ್ವಿ ಶೆಟ್ಟಿ ಕಾಟುಕುಕ್ಕೆ, ಸೌರ್ಪರ್ಣಿಕಾ ಕುರಿಯತ್ತಡ್ಕ, ನವನೀಯ ನಾಯ್ಕ್ ಬಿ ಕವಿಗೋಷ್ಠಿಯಲ್ಲಿ ಸ್ವರಚಿತ ಕವನಗಳನ್ನು ವಾಚಿಸಿದರು. 
    ಸವಿಹೃದಯದ ಕವಿ ಮಿತ್ರರು ವೇದಿಕೆಯ ನಿರ್ದೇಶಕ ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಶುಕ್ರವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ವೇದಿಕೆಯ ಇನ್ನೋರ್ವ ನಿರ್ದೇಶಕ, ಕಾರ್ಟೂನ್ ಕಾಸರಗೋಡಿನ ಅಧ್ಯಕ್ಷ ವೆಂಕಟ್ ಭಟ್ ಎಡನೀರು ಅವರು ಮಕ್ಕಳ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅಭಿನಂದನಾ ಪತ್ರ ವಿತರಿಸಿ ಶುಭಹಾರೈಸಿದರು. ವೇದಿಕೆಯ ಸಂಚಾಲಕ ಸುಭಾಶ್ ಪೆರ್ಲ, ಮಹಾಲಿಂಗೇಶ್ವರ ಶರ್ಮ ಎನ್.ಮುಳ್ಳೇರಿಯ, ಪದ್ಮಾ ಎಂ. ಮುಳ್ಳೇರಿಯ, ಸವಿತಾ ಕೆ, ಗೋವಿಂದ ನಾಯ್ಕ್ ಸಾಯ,ಸವಿತಾ ಶೆಟ್ಟಿ ಕಾಟುಕುಕ್ಕೆ,ಪದ್ಮಾವತಿ, ಪ್ರಣವ್ ಮೊದಲಾದವರು ನೇತೃತ್ವ ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries