HEALTH TIPS

ಪೇಜಾವರ ಹಿರಿಯ ಯತಿಗಳು ಹಾಗೂ ಕಾಸರಗೋಡಿನ ನಿಕಟತೆ:

        ಮಂಜೇಶ್ವರ: ಸೋಮವಾರ ಕೃಷ್ಣೈಕ್ಯರಾದ ಉಡುಪಿ ಮಾದವಸಂಸ್ಥಾನ ಪೇಜಾವರ ಹಿರಿಯ ಮಠಾಧೀಶ ಶ್ರೀವಿಶ್ವೇಶ ತೀರ್ಥ ಪಾದಂಗಳಿಗೆ ಹಾಗೂ ಕಾಸರಗೋಡಿಗೆ ನಿಕಟ ಸಂಬಂಧ ಹಲವು ಕಾರಣಗಳಿಂದ ಇದೆ.
      ಕೇರಳ ಕರ್ನಾಟಕ ಗಡಿ ಪ್ರದೇಶವಾದ ಮಂಜೇಶ್ವರ ಕಣ್ವತೀರ್ಥದ ಶ್ರೀಬ್ರಹ್ಮೇಶ್ವರ ದೇವಾಲಯ ಪೇಜಾವರ ಮಠದ ನೇರ ಅಂಕೆಯಲ್ಲಿರುವ ಪುಣ್ಯಭೂಮಿ. ಹಾಗೂ ಪೇಜಾವರ ಮಠದ ಶಾಖೆಯೂ ಇಲ್ಲಿದೆ. ಸಾವಿರ ಶತಮಾನಗಳ ಹಿಂದೆ ಕಣ್ವತೀರ್ಥ, ತಲಪಾಡಿ, ಉದ್ಯಾವರ ಪ್ರದೇಶಗಳನ್ನು ಪೇಜಾವರ ಮಠಕ್ಕೆ ಉಂಬಳಿ ನೀಡಿರುವುದಾಗಿ ಪ್ರತೀತಿ. ಜೊತೆಗೆ ಕಣ್ವತೀರ್ಥದಲ್ಲಿ ಪೇಜಾವರ ಮಠದ ಪೂರ್ವ ಪರಂಪರೆಯ ಇಬ್ಬರು ಯತಿವರೇಣ್ಯರ ಬೃಂದಾವನವೂ ಇದೆ.
      ವೇದಪಾರಂಗತರಾಗಿ ನಿಗಮಾಗಮ ಪಂಡಿತರಾಗಿದ್ದ ಪೇಜಾವರ ಮಠಾಧೀಶ ವಿಜಯಧ್ವಜ ತೀರ್ಥರ ಸಮಾಧಿ ಕಣ್ವತೀರ್ಥದಲ್ಲಿದೆ. ಜೊತೆಗೆ ಪೇಜಾವರ ಮಠಾಧೀಶ ವಿಶ್ವೇಶತೀರ್ಥರಿಗೆ ದೀಕ್ಷೆ ನೀಡಿದ ಅವರ ಗುರುಗಳಾದ ವಿಶ್ವಮಾನ್ಯ ತೀರ್ಥರ ಬೃಂದಾವನವೂ ಕಣ್ವತೀರ್ಥದಲ್ಲೇ ಇರುವುದು ವಿಶೇಷವಾಗಿದೆ.
   ಕಾಸರಗೋಡಿನ ವಿವಿಧ ದೇವಾಲಯ, ಸಂಘಸಂಸ್ಥೆಗಳ ಕಾರ್ಯಕ್ರಮಗಳಲ್ಲಿ ಹಲವು ಬಾರಿ ಭಾಗವಹಿಸಿ ಹರಸಿದ್ದರು. ಜೊತೆಗೆ ವಿಹಿಂಪದ ವಿವಿಧ ಕಾರ್ಯಕ್ರಮಗಳಲ್ಲೂ ಆಶೀರ್ವಚನಗೈದಿದ್ದರು.
   ಎಡನೀರು ಮಠದೊಂದಿಗೆ ನಿಕಟತೆ:
     ಎಡನೀರು ಮಠದೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದ ಪೇಜಾವರ ಹಿರಿಯ ಶ್ರೀಗಳು ದಶಕಗಳ ಹಿಂದೆ ಎಡನೀರಲ್ಲಿ ನಡೆದ ಯತಿಗಳ ತಾಳಮದ್ದಳೆ ಕೂಟವೊಂದರಲ್ಲಿ ಸ್ವತಃ ಅರ್ಥಧಾರಿಗಳಾಗಿ ನಿರರ್ಗಳ ವಾಗ್ಝರಿಯ ಮೂಲಕ ಗಮನ ಸೆಳೆದಿದ್ದರು. ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳೊಂದಿಗೆ ಆತ್ಮೀಯರಾಗಿದ್ದ ವಿಶ್ವೇಶ ತೀರ್ಥರು ಹಲವಾರು ಬಾರಿ ಭೇಟಿ ನೀಡುತ್ತಿದ್ದರು.
   ಸಂತಾಪ:
 ವಿಶ್ವೇಶ ತೀರ್ಥ ಪಾದಂಗಳ ನಿಧನಕ್ಕೆ ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳು ಹಾಗೂ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
ಪೋಟೋ ವಿವರ:
  1)ವಿಶ್ವೇಶ ತೀರ್ಥ ಶ್ರೀಗಳು ಎಡನೀರು ಮಠದಲ್ಲಿ...ಸಂಗ್ರಹ ಚಿತ್ರ
  2)ವಿಶ್ವೇಶ ತೀರ್ಥ ಶ್ರೀಗಳು ಕಣ್ವತೀರ್ಥ ಬ್ರಹ್ಮೇಶ್ವರ ದೇವಾಲಯದಲ್ಲಿ....ಸಂಗ್ರಹ ಚಿತ್ರ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries