ಉಪ್ಪಳ : ಕುಬಣೂರು ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಫೆಬ್ರವರಿ 10ರಂದು ವಾರ್ಷಿಕ ಬಲಿವಾಡುಕೂಟ, ಶತರುದ್ರಾಭಿಷೇಕ, ಹಾಗೂ ರಂಗ ಪೂಜೆ ಜರಗಲಿದ್ದು ಆ ಬಗೆಗಿನ ಪೂರ್ವ ಭಾವಿ ಸಭೆ ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ಜರಗಿತು.
ಸಭೆಯಲ್ಲಿ ನೂತನ ಉತ್ಸವ ಸಮಿತಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ವಸಂತ ಕುಮಾರ್ ಮಯ್ಯ ತಿಂಬರ, ಉಪಾಧ್ಯಕ್ಷರಾಗಿ ಹರಿಶ್ಚಂದ್ರ ಬಲ್ಲಾಳ್ ಹಾಗೂ ಚಂದ್ರಹಾಸ ಶೆಟ್ಟಿ ಒಡ್ಡಂಬೆಟ್ಟು ಗುತ್ತು, ದಯಾನಂದ ಪ್ರತಾಪನಗರ, ಮಂಜುನಾಥ ಭಟ್ ಅವರನ್ನು ಆರಿಸಲಾಯಿತು ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ಪುಳಿಕುತ್ತಿ, ಜೊತೆ ಕಾರ್ಯದರ್ಶಿಗಳಾಗಿ ಶಿವರಾಜ್ ಶೆಟ್ಟಿ, ಸಚಿನ್ ಪ್ರತಾಪ ನಗರ, ಮಿಥುನ್ ಶೆಟ್ಟಿ ತಿಂಬರ, ಕೋಶಾಧಿಕಾರಿಯಾಗಿ ಪ್ರದೀಪ್ ಕುಮಾರ್ ಕಾರಂತ್, ಮತ್ತು ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಶಿವಾನಂದ ಶೆಟ್ಟಿ ತಿಂಬರ, ಸದಸ್ಯರಾಗಿ ಗೊಪಾಲ್ ಪುಳಿಕುತ್ತಿ, ಚಂದ್ರ ಶೇಖರ ದೇವಾಡಿಗ, ಸಿದ್ದಪ್ಪ ತಿಂಬರ, ಮೋಹನ್ ನಾಯ್ಕ್, ಮಂಜುನಾಥ ಶೆಟ್ಟಿ, ಕಿಶನ್ ಪುಳಿಕುತ್ತಿ, ಶ್ರೀಮತಿ ಸುಜಾತ, ಅನಿತಾ ಪಚ್ಚಂಬಳ, ಜಯಶ್ರೀ ಆಳ್ವ ತಿಂಬರ, ಯಶೋದ, ಸರಸ್ವತಿ, ಸುನೀತಾ ರೈ ತಿಂಬರ ಇವರನ್ನ ಆಯ್ಕೆ ಮಾಡಲಾಯಿತು.
ಕ್ಷೇತ್ರದ ಗೌರವ ಸಲಹೆಗಾರ ಅಶೋಕ್ ಕುಮಾರ್ ಹೊಳ್ಳ ಸಲಹೆಗಳನ್ನು ನೀಡಿದರು. ಮೊಕ್ತೇಸರ ಶಂಕರನಾರಾಯಣ ಕುಬಣೂರಾಯ, ಹರಿನಾಥ ಭಂಡಾರಿ ಒಡ್ಡಂಬೆಟ್ಟು ಗುತ್ತು, ದುಗ್ಗಪ್ಪಶೆಟ್ಟಿ ತಿಂಬರ, ಸೇವಾ ಸಮಿತಿ ಅಧ್ಯಕ್ಷರಾದ ರಮೇಶ ಆಳ್ವ ತಿಂಬರ ಉಪಸ್ಥಿತರಿದ್ದರು. ಗುರುಪ್ರಸಾದ ಹೊಳ್ಳ ತಿಂಬರ ಸ್ವಾಗತಿಸಿ, ರಾಮಚಂದ್ರ ಬಲ್ಲಾಳ್ ನಿರೂಪಿಸಿ, ಸತೀಶ ಶೆಟ್ಟಿ ಒಡ್ಡಂಬೆಟ್ಟುಗುತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು ಹಾಗೂ ಹರಿಶ್ಚಂದ್ರ ಬಲ್ಲಾಳ ವಂದಿಸಿದರು.