ಮಂಜೇಶ್ವರ: ಕೇರಳ ದಿನೇಶ್ ಬೀಡಿ ಸಹಕಾರಿ ಸಂಘದ ಸುವರ್ಣ ಜ್ಯುಬಿಲಿಯ ಅಂಗವಾಗಿ ಇಂದು(ಮಂಗಳವಾರ) ಹೊಸಂಗಡಿಯಲ್ಲಿ ಮಂಜೇಶ್ವರ ಸ್ಥಳೀಯ ಸಂಘದ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.
ಬೆಳಿಗ್ಗೆ 9ಕ್ಕೆ ಬಂಗ್ರಮಂಜೇಶ್ವರದಿಂದ ವೇದಿಕೆಗೆ ಶೋಭಾಯಾತ್ರೆ ಆಗಮಿಸಲಿದೆ. ಬಳಿಕ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಶಾಸಕ ಎಂ.ಸಿ.ಖಮರುದ್ದೀನ್ ಉದ್ಘಾಟಿಸುವರು. ವಿವಿಧ ವಲಯಗಳಲ್ಲಿ ಸಾಧಕರಾದವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು. ವಿವಿಧ ಸಹಕಾರಿ ಬ್ಯಾಂಕ್ ಗಳ ನಿರ್ದೇಶಕರು, ಗಣ್ಯರು ಭಾಗವಹಿಸುವರು.