HEALTH TIPS

ಬದಿಯಡ್ಕದಲ್ಲಿ ಕಥೆಗಾರ ಜನಾರ್ದನ ಎರ್ಪಕಟ್ಟೆ ಸಂಸ್ಮರಣೆ


           ಬದಿಯಡ್ಕ: ದಲಿತ ಸ್ಪಂದನೆಯ ಧ್ವನಿಯನ್ನೊಳಗೊಂಡ ಎರ್ಪಕಟ್ಟೆಯವರ ಕಥೆಗಳು ಈ ನೆಲದ ಸಂಸ್ಕøತಿಯನ್ನು ಸಾಹಿತ್ಯಾತ್ಮಕವಾಗಿ ಪೆÇೀಣಿಸುವಲ್ಲಿ ಯಶಸ್ವಿಯಾಗಿ ಸಾರಸ್ವತ ರಂಗದಲ್ಲಿ ದಾಖಲಾಗಿದೆ.ದಲಿತ ಜನಾಂಗದಲ್ಲಿ ಜನಿಸಿದರು ಕೂಡ ಸಶಕ್ತ ಶಿಕ್ಷಣ ಹಾಗೂ ಉದ್ಯೋಗದ ಜತೆಗೆ ಇಲ್ಲಿನ ನಾಡಿ ಮಿಡಿತವನ್ನು ಕಥೆಗಳ ಮೂಲಕ ಸೃಷ್ಟಿಸಿದ ಎರ್ಪಕಟ್ಟೆಯವರು ಕಾಸರಗೋಡಿನ ಸಮರ್ಥ ಕಥೆಗಾರ ಎನ್ನುವುದನ್ನು ನಿರೂಪಿಸಿ ಕಣ್ಮರೆಯಾಗಿದ್ದಾರೆ ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ಉಪನ್ಯಾಸಕಿ, ಸಂಶೋಧಕಿ  ಡಾ.ಆಶಾಲತ ಸಿ.ಕೆ.ಅಭಿಪ್ರಾಯಪಟ್ಟರು.
      ಬದಿಯಡ್ಕದ ಸಂಸ್ಕøತಿ ಭವನದಲ್ಲಿ ಶನಿವಾರ ಅಂಬೇಡ್ಕರ್ ವಿಚಾರ ವೇದಿಕೆಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಖ್ಯಾತ ಕಥೆಗಾರ ದಿ. ಜನಾರ್ದನ ಎರ್ಪಕಟ್ಟೆ ಅವರ ಏಳನೇ ವರುಷದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಎರ್ಪಕಟ್ಟೆಯವರ ಭಾವಚಿತ್ರಕ್ಕೆ ಹಾರಾರ್ಪಣೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ನಡೆದ ಸಂಸ್ಮರಣಾ ಸಭೆಯಲ್ಲಿ ಅವರು ಮಾತನಾಡಿದರು.
     ಸಾಹಿತ್ಯ ವಲಯಕ್ಕೊಂದು ಕೊಡುಗೆಯಾಗಿ ವಾಚಕರ ಮನದಲ್ಲಿ ಶಾಶ್ವತವಾಗಿ ಇರುವ ಎರ್ಪಕಟ್ಟೆಯವರ ಆತ್ಮಕ್ಕೆ ಇಂತಹ ಸಂಸ್ಕರಣೆಗಳು  ನಿತ್ಯಶಾಂತಿಗೆ ಪ್ರಾರ್ಥನೆಯಾಗಬಲ್ಲುದು ಹಾಗೂ ನಮ್ಮ ನೆನಪುಗಳನ್ನು ಪುನಜ್ರ್ಜೀವನಗೊಳಿಸುವಂತಾಹಿಸುತ್ತದೆ ಎಂದರು.
   ಹಿರಿಯ ಕವಿ,ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಎರ್ಪಕಟ್ಟೆಯವರ ಸಾಹಿತ್ಯ ಸೇವೆಗಳು ಗಡಿನಾಡಿನ ಬಾಂಧವ್ಯತೆಗೊಂದು ಬೆಸುಗೆಯಾಗಿದೆ ಎಂದರು. ಕಾಸರಗೋಡಿನ ಮಾನ್ಯದಲ್ಲಿ ಜನಿಸಿ ಸುಶಿಕ್ಷಿತರಾಗಿ ಕತೆಗಾರರಾಗಿ ಸಾಮಾಜಿಕ ಜಾಗೃತಿ ಮೂಡಿಸಿದ್ದಾರೆ. ಔದ್ಯೋಗಿಕವಾಗಿ ನೆರೆಯ ಕರ್ನಾಟಕದ ಸುಳ್ಯವನ್ನು ಕೇಂದ್ರೀಕರಿಸಿ ಸಾಹಿತ್ಯವನ್ನು ಸಂಪನ್ನಗೊಳಿಸುವುದರ ಜತೆಗೆ ಹಲವಾರು ಸಾಹಿತ್ಯ ಪ್ರೇಮಿಗಳಿಗೆ,ಕವಿಗಳಿಗೆ ವೇದಿಕೆಯನ್ನು ಸೃಷ್ಟಿಸಿ ಪೆÇ್ರೀತ್ಸಾಹಿಸಿದವರು ಹೀಗೆ ಗಡಿನಾಡಿನ ಈ ಕತೆಗಾರನ ಖ್ಯಾತಿ ಇಡೀ ನಾಡಿಗೆ ಹಬ್ಬಿರುವುದು ಸ್ತುತ್ಯಾರ್ಹ ಎಂದರು.ಅವರ ಸ್ಮರಣೆಯನ್ನು ವಷರ್ಂಪ್ರತಿ ನಡೆಸುವ ಮೂಲಕ  ಅಂಬೇಡ್ಕರ್ ವಿಚಾರ ವೇದಿಕೆ ಕಾರ್ಯಕ್ರಮ ನಡೆಸುವುದು ಸಾಹಿತ್ಯಕ್ಕೆ ಸಾವಿಲ್ಲ ಎಂಬುದನ್ನು ನಿರೂಪಿಸಿದಂತಾಗಿದೆ ಎಂದರು.
      ಕಾಂಞಗಾಡ್ ವಲಯ ಟ್ರಾಫಿಕ್ ಪೆÇೀಲಿಸ್ ಸಬ್ ಇನ್ಸ್‍ಪೆಕ್ಟರ್ ಪರಮೇಶ್ವರ ನಾಯ್ಕ ಬಾಳೆಗುಳಿ, ವಿಚಾರ ವೇದಿಕೆಯ ಸ್ಥಾಪಕರಲ್ಲಿ ಓರ್ವರಾದ ನಾರಾಯಣ ಬಾರಡ್ಕ, ಎರ್ಪಕಟ್ಟೆಯವರ ಪುತ್ರ ಚೇತನ್, ಎರ್ಪಕಟ್ಟೆಯವರ ಒಡನಾಡಿ ಕಥೆಗಾರ ಶಶಿ ಭಾಟಿಯ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.
  ಈ ಸಂದರ್ಭ ನಡೆದ ಕಥಾಗೋಷ್ಠಿಯಲ್ಲಿ ಸಾಹಿತಿ ದಯಾನಂದ ರೈ ಕಳ್ವಾಜೆ, ಕಥೆಗಾರ್ತಿ ಪದ್ಮಾವತಿ ಏದಾರ್, ಪತ್ರಕರ್ತ ಪುರುಷೋತ್ತಮ ಭಟ್ ಪುದುಕೋಳಿ ಸ್ವರಚಿತ ಕಥೆಗಳನ್ನು ವಾಚಿಸಿದರು. ಯುವ ಗಾಯಕ ವಸಂತ ಬಾರಡ್ಕ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ಸುಂದರ ಬಾರಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ವಂದಿಸಿದರು.ದಿ.ಎರ್ಪಕಟ್ಟೆಯವರ ಪತ್ನಿ ಶಾರದಾ, ಪುತ್ರ ಪೃಥ್ವಿರಾಜ್, ಸಹೋದರಿ ಸುಮಿತ್ರ, ಸುಭಾಶ್ ಪೆರ್ಲ, ಕೃಷ್ಣ ದರ್ಭೆತ್ತಡ್ಕ, ಜಯ ಮಣಿಯಂಪಾರೆ, ಗ್ರಾ.ಪಂ.ಸದಸ್ಯೆ ಶಾಂತಾ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries