ಮುಳ್ಳೇರಿಯ: ಎರಡೂ ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿರುವ ಮಾಜಿ ಅನಿವಾಸಿ ನೆರವಿಗಾಗಿ ಎದುರುನೋಡುತ್ತಿದ್ದಾರೆ.
ಕಾರಡ್ಕ ಚೆನ್ನಂಗೋಡು ಶಾಂತಿನಗರ ನಿವಾಸಿ ಆನಂದ ಕುಮಾರ್ ಅವರು ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗಾಗಿ ಕೊಡುಗೈದಾನಿಗಳು ಮುಂದಾಗಬೇಕಾಗಿದೆ. ಹಲವು ವರ್ಷಗಳಿಂದ ಅನಿವಾಸಿಯಾಗಿ ಜೀವನ ಸಾಗಿಸಿದ ಆನಂದ ಕುಮಾರ್ ಅವರು ಈ ವರೆಗಿನ ಸಂಪಾದನೆ ಚಿಕಿತ್ಸೆಗಾಗಿ ವೆಚ್ಚ ಮಾಡಲಾಗಿದೆ. ಇದೀಗ ಮುಂದಿನ ಚಿಕಿತ್ಸೆಗಾಗಿ ಅಗತ್ಯದ ಮೊತ್ತಕ್ಕಾಗಿ ದಾರಿಕಾಣದೆ ಕಂಗಾಲಾಗಿದ್ದಾರೆ. ಇದೀಗ ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಬೇಕಾಗಿದೆ. ಕಿಡ್ನಿ ಬದಲಾಯಿಸಿದರೆ ಮಾತ್ರವೇ ರಕ್ಷಿಸಲು ಸಾಧ್ಯವೆಂದು ವೈದ್ಯರು ತಿಳಿಸಿದ್ದಾರೆ. ಇದಕ್ಕೆ ಬಾರಿ ಹಣದ ಅವಶ್ಯಕತೆಯಿದೆ. ಈ ಮೊತ್ತದ ಬಗ್ಗೆ ಕನಸು ಕಾಣಲೂ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಈ ಅವಸ್ಥೆಯನ್ನು ಕಂಡ ಸ್ಥಳೀಯ ನಾಗರಿಕರು ಚಿಕಿತ್ಸಾ ಸಹಾಯ ನಿಧಿ ರೂಪೀಕರಿಸಿದ್ದು, ಸೌತ್ ಇಂಡಿಯನ್ ಬ್ಯಾಂಕ್ ಕಾಂಞಂಗಾಡ್ ಬ್ರಾಂಚ್‍ನಲ್ಲಿ ಅಕೌಂಟ್ ತೆರೆಯಲಾಗಿದೆ. ಪತ್ನಿ, ಇಬ್ಬರು ಮಕ್ಕಳ ಕುಟುಂಬವನ್ನು ಸಲಹಲು ಸಾಧ್ಯವಾಗದ ಸ್ಥಿತಿಯಲ್ಲಿರುವ ಆನಂದ ಕುಮಾರ್ ಅವರಿಗೆ ನೆರವು ನೀಡಬೇಕಾಗಿ ಕೇಳಿಕೊಳ್ಳಲಾಗಿದೆ. ಆನಂದ ಕುಮಾರ್ ಚಿಕಿತ್ಸಾ ಸಹಾಯ ನಿಧಿ, ಅಕೌಂಟ್ ನಂಬ್ರ 0632053000007037, ಐ.ಎಫ್.ಸಿ.ಕೋಡ್ ಐಎಫ್‍ಸಿ ಕೋಡ್ 0000632, ಕಾಂಞಂಗಾಡ್ ಬ್ರಾಂಚ್‍ಗೆ ನೆರವು ನೀಡುವಂತೆ ಕೇಳಿಕೊಳ್ಳಲಾಗಿದೆ.