ಕಾಸರಗೋಡು: ಪುಲ್ಲೂರ್ ಪೆರಿಯ-ಬೇಡಡ್ಕ ಗ್ರಾಮ ಪಮಚಾಯಿತಿಗಳ ಮಧ್ಯೆ ಸಂಪರ್ಕ ಕಲ್ಪಿಸುವ ಆಯಂಕಡವು ಸೇತುವೆಯನ್ನು ಡಿಸೆಂಬರ್ 8ರಂದು ಮುಖ್ಯಮಂತ್ರಿ ಪಿಣರಾಯಿ ವಇಜಯನ್ ಲೋಕಾರ್ಪಣೆಗೊಳಿಸಲಿದ್ದಾರೆ.ಪೆರ್ಲಡ್ಕ-ಆಯಂಕಡವು-ಪೆರಿಯ ರಸ್ತೆಯ ತೇಜಸ್ವಿನಿ ನದಿಯಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. ಪ್ರಭಾಕರನ್ ಆಯೋಗದ ವರದಿಯ ಹಿನ್ನೆಲೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ 14 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ.
24 ಮೀಟರ್ ಎತ್ತರ, 150 ಮೀಟರ್ ಉದ್ದದಲ್ಲಿರುವ ಸೇತುವೆಯಲ್ಲಿ 3.800 ಕಿಮೀ ಮೆಕ್ ಡ್ಯಾಂ ನಡೆಸಿದ ಅಪೆÇ್ರೀಚ್ ರಸ್ತೆಈಗಾಗಲೇ ಪೂರ್ಣಗೊಂಡಿದೆ.ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ತರ ಕೊಡುಗೆಯಾಗುವ ನಿರೀಕ್ಷೆಯಿದೆ. ಮಡಿಕೇರಿ, ಸುಳ್ಯ, ಸುಬ್ರಹ್ಮಣ್ಯ ಪ್ರದೇಶಗಳಿಂದ ಬೇಕಲಕ್ಕೆ ಆಗಮಿಸಲು ಈ ಸೇತುವೆ ಸಹಕಾರಿಯಾಗಲಿದೆ. ಈ ಸೇತುವೆ ಪೂರಕವಾಗಿದೆ. ಜಿಲ್ಲೆಯ ದೇಲಂಪಾಡಿ, ಕಾರಡ್ಕ, ಮುಳಿಯಾರು, ಬೆಳ್ಳೂರುಗ್ರಾಮಪಂಚಾಯತ್ ನಿವಾಸಿಗಳಿಗೆ ಪೆರಿಯ ಕೇದ್ರೀಯ ವಿವಿಗೆ, ಕಾಞಂಗಾಡ್ ನಗರಕ್ಕೆ ತಲಪಲು ಸುಲಭಸಾಧ್ಯ. ಎತ್ತರವಾಗಿರುವ ಸೇತುವೆ ಪ್ರಕೃತಿ ರಮಣೀಯ ಆವರಣದಲ್ಲಿರುವುದು ಜನತೆಯ ಆಕರ್ಷಣೆಗೆ ಕಾರಣವಾಗಲಿದೆ. ಸೇತುವೆಯ ಕೆಳಬಾಗವನ್ನು ಸದುಪಯೋಗಪಡಿಸಿ, ಮುಕ್ತ ಸಭಾಂಗಣ, ಫುಡ್ ಕೋರ್ಟ್, ಶೌಚಾಲಯ ಬ್ಲಾಕ್ ಇತ್ಯಾದಿಗಳನ್ನು ಮೊದಲ ಹಂತದಲ್ಲೂ, ನದಿಯಸೌಂದರ್ಯ ಈಕ್ಷಣೆಗೆ ಗ್ಲಾಸ್ ಬ್ರಿಜ್ ಯೋಜನೆಯನ್ನುದಿತೀಯ ಹಂತದಲ್ಲೂ ನಿರ್ಮಿಸುವ ವಿಚಾರ ಪ್ರವಾಸೋದ್ಯಮ ಇಲಾಖೆಯಪರಿಶೀಲಿನೆಯಲ್ಲಿದೆ. ಎನ್.ಎಚ್.66 ಪೆರಿಯಕ್ಕೆ ತಲಪಲು 2500 ಕಿಮೀ ರಸ್ತೆಯ ಅಭಿವೃದ್ಧಿಗೆ ನಿಧಿಯನನು ಕಾಸರಗೋಡು ಅಭಿವೃಧ್ಧಿಪ್ಯಾಕೇಜ್ ಯೋಜನೆಯಲ್ಲಿ ಅಳವಡಿಸಲಾಗಿದೆ.
ಡಿ.8ರಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇತುವೆ ಉದ್ಘಾಟಿಸುವರು. ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಶಾಸಕರಾದ ಕೆ.ಕುಂಞÂರಾಮನ್, ಎಂ.ರಾಗೋಪಾಲನ್, ಎನ್.ಎ.ನೆಲ್ಲಿಕುನ್ನು, ಎಂ.ಸಿ.ಕಮರುದೀನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ಸಿ.ಕಮರುದ್ದೀನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಪಾಲ್ಗೊಳ್ಳುವರು.