ಬದಿಯಡ್ಕ: ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ನ 70 ವಿದ್ಯಾರ್ಥಿಗಳು ಡಿಸೆಂಬರ್ 3ರಂದು ಅನಂತಪುರ ಶ್ರೀ ಅನಂತಪದ್ಮನಾಭ ಕ್ಷೇತ್ರಕ್ಕೆ ಹೈಕಿಂಗ್ ನಡೆಸಿದರು.
ಪೆರ್ಣೆ ಮತ್ತು ನಾಯ್ಕಾಪಿನಿಂದ ಎರಡು ತಂಡಗಳಾಗಿ ಕಾಲ್ನಡಿಗೆಯ ಮೂಲಕ ಕ್ಷೇತ್ರಕ್ಕೆ ತಲುಪಿದ ವಿದ್ಯಾರ್ಥಿಗಳು ಪರಿಸರ ಸ್ವಚ್ಛತೆಗೆ ಆದ್ಯತೆ ನೀಡುವ ಸಲುವಾಗಿ ಕ್ಷೇತ್ರ ಪರಿಸರವನ್ನು ಸ್ವಚ್ಛಗೊಳಿಸಿದರು.ಈ ಸಂದರ್ಭದಲ್ಲಿ ಶಾಲಾ ಸ್ಕೌಟ್ಸ್ ಅಧ್ಯಾಪಕರಾದ ಸೂರ್ಯನಾರಾಯಣ ಯಚ್, ಶಿವರಂಜನ್ ಪಿ, ಅವಿನಾಶ ಕಾರಂತ.ಎಮ್ ಮತ್ತು ಗೈಡ್ ಕ್ಯಾಪ್ಟನ್ ವಾಣಿ ಪಿ ಎಸ್, ಅನ್ನಪೂರ್ಣ ಎಸ್, ಸುಲಲಿತ ಪಿ ಕೆ ಉಪಸ್ಥಿತರಿದ್ದರು.