ಕಾಸರಗೋಡು: ತ್ರಿಶ್ಯೂರಿನಲ್ಲಿ ನಡೆದ ಆಲ್ ಕೇರಳ ಡ್ಯಾನ್ಸ್ ಟೀಚರ್ಸ್ ಯೂನಿಯನ್(ಎಕೆಡಿಟಿಯು) ಸೃಷ್ಟಿ ರಾಜ್ಯಮಟ್ಟದ ಸಮಾವೇಶದಲ್ಲಿ ಕಾಸರಗೋಡು ಜಿಲ್ಲೆಯಿಂದ ವಿದುಷಿ ಶಶಿಕಲಾ ಟೀಚರ್ ಭಾಗವಹಿಸಿದ್ದರು.
ತ್ರಿಶ್ಯೂರಿನ ಟೌನ್ ಹಾಲ್‍ನಲ್ಲಿ ನಡೆದ ಎಕೆಡಿಟಿಯು ಸೃಷ್ಟಿ ರಾಜ್ಯಮಟ್ಟದ ಉದ್ಘಾಟನೆಯನ್ನು ರಾಜ್ಯದ 13 ಜಿಲ್ಲೆಗಳಿಂದ ಆಗಮಿಸಿದ ನೃತ್ಯ ವಿದುಷಿಯರು ದೀಪ ಪ್ರಜ್ವಲಿಸಿ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಸೋಮಶೇಖರನ್ ನಾಯರ್ ಅಧ್ಯಕ್ಷತೆ ವಹಿಸಿದರು. ಡಾ.ಟಿ.ಕೆ.ನಾರಾಯಣನ್, ಕಲಾಮಂಡಲ ಪದ್ಮನಿ, ಎನ್.ರಾಧಾಕೃಷ್ಣನ್ ಮತ್ತಿತರರು ಮಾತನಾಡಿದರು. ಸಮಾವೇಶದಲ್ಲಿ ವಿದುಷಿ ಶಶಿಕಲಾ ಟೀಚರ್ ಅವರನ್ನು ಗೌರವಿಸಿ ಸಮ್ಮಾನಿಸಲಾಯಿತು.