ತಿರುವನಂತಪುರ: ಶಬರಿಮಲೆಯಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ನಾನಾ ಕಡೆ ಡ್ರೋಣ್ ಕಣ್ಗಾವಲು ಏರ್ಪಡಿಸಲಾಗಿದೆ. ಜತೆಗೆ ಕೇಂದ್ರ ಪಡೆಯನ್ನೂ ಶಬರಿಮಲೆ ಆಸುಪಾಸಿನಲ್ಲಿ ನಿಯೋಜಿಸಲಾಗಿದೆ. ಶಬರಿಮಲೆ ಮತ್ತು ಆಸುಪಾಸು ಆಕಾಶದಲ್ಲಿ ಡ್ರೋಣ್ ಮೂಲಕ ವೀಕ್ಷಣಾಕಾರ್ಯವನ್ನು ಬಲಪಡಿಸಲಾಗಿದೆ.
ಶಬರಿಮಲೆಗೆ ಉಗ್ರರ ನುಸುಳುವಿಕೆ ಸಾಧ್ಯತೆ ಬಗ್ಗೆ ಗುಪ್ತಚರ ಇಲಾಖೆ ಈ ಹಿಂದೆ ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಭದ್ರತಾಕಾರ್ಯದಲ್ಲಿ ಹೆಚ್ಚಿನ ನಿಗಾವಹಿಸಲಾಗುತ್ತಿದೆ.
ಶಬರಿಮಲೆಗೆ ಆಘಮಿಸುತ್ತಿರುವ ಎಲ್ಲಾ ವಾಹನಗಳನ್ನೂ ಬಿಗು ತಪಾಸಣೆಗೊಳಪಡಿಸಲಾಗುತ್ತಿದೆ. ಪೊಲೀಸರ ತಪಾಸಣೆಯಿಲ್ಲದೆ ಯಾವುದೇ ವಾಹನವನ್ನೂ ಮುಂದಕ್ಕೆ ಬಿಟ್ಟುಕೊಡಲಾಗುತ್ತಿಲ್ಲ. ಬಾಂಬ್ ಸ್ಕ್ವೇಡ್ ಮತ್ತು ಶ್ವಾನದಳವನ್ನೂ ಬಳಸಲಾಗುತ್ತಿದೆ. ಸನ್ನಿದಾನಕ್ಕೆ ಹಾಗೂ ಆಸುಪಾಸಿನ ಪ್ರದೇಶಗಳಿಗೆ ರವಾನೆಯಾಗುತ್ತಿರುವ ಆಹಾರಸಾಮಗ್ರಿ, ಸರಕುಗಳನ್ನೂ ಪೂರ್ಣತಪಾಸಣೆಗೊಳಪಡಿಸಲಾಗುತ್ತಿದೆ.
ಭಕ್ತರು ಯಾ ಪೊಲೀಸರ ಧಿರಿಸಿನಲ್ಲೂ ಉಗ್ರರು ನುಸುಳುವ ಸಾಧ್ಯತೆಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಇದಕ್ಕಾಗಿ ಗುರುತಿನ ಚೀಟಿ ಕಡ್ಡಾಯ ತಪಾಸಣೆ ನಡೆಸಲಾಗುತ್ತಿದೆ.