ಬದಿಯಡ್ಕ: ಕಾಸರಗೋಡು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕನ್ನಡಿಗರ ಅನುಕೂಲಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆಯಲು ಅಂಬೇಡ್ಕರ್ ವಿಚಾರ ವೇದಿಕೆ ಭಾಷಾ ಅಲ್ಪಸಂಖ್ಯಾತ ಅಯೋಗಕ್ಕೆ ಮನವಿ ಸಲ್ಲಿಸಿದೆ.
ಕಾಸರಗೋಡು ಹಾಗೂ ಮಂಜೇಶ್ವರ ತಾಲೂಕಿನ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕನ್ನಡಿಗರು ತಮ್ಮ ದೂರು ಹಾಗೂ ಇತರ ಸಂಕಷ್ಟ ಸಮಸ್ಯೆಗಳನ್ನು ತೋಡಿಕೊಳ್ಳಲು ಸಂಕಷ್ಟ ಪಡುತ್ತಿದ್ದಾರೆ, ಮತ್ತು ಪೊಲೀಸ್ ಠಾಣೆಗಳಲ್ಲಿ ಮಲೆಯಾಳದಲ್ಲೇ ದೂರು ಬರೆದು ತರಲು ಗದರಿಸಿ ಒತ್ತಡ ಹೇರುತ್ತಿದ್ದಾರೆ. ನಿಜವಾಗಿ ಇಲ್ಲಿ ತಮ್ಮ ದೂರು, ಮನವಿ ನೀಡಲು ಕನ್ನಡವನ್ನು ಬಳಸಬಹುದು ಎಂಬ ಆದೇಶವಿದ್ದರೂ ಪೊಲೀಸ್ ಇಲಾಖೆ ಅದನ್ನು ಪಾಲಿಸುತ್ತಿಲ್ಲ. ಇದಕ್ಕಾಗಿ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಕನ್ನಡಿಗರ ದೂರು, ಮನವಿ ಕನ್ನಡದಲ್ಲಿ ಸ್ವೀಕರಿಸಲು ಪ್ರತ್ಯೇಕ ಕೌಂಟರ್ ತೆರೆಯಬೇಕೆಂದು ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ ಅವರು ಇತ್ತೀಚೆಗೆ ಕಾಸರಗೋಡಿನಲ್ಲಿ ನಡೆದ ಭಾಷಾ ಅಲ್ಪಸಂಖ್ಯಾತ ಅಯೋಗದ ಅದಾಲತ್‍ನಲ್ಲಿ ಮನವಿ ಮಾಡಿದ್ದಾರೆ.