ಮಂಜೇಶ್ವರ: ಹದಿನೆಂಟು ಪೇಟೆಗಳ ದೇವಾಲಯವೆಂಬ ಖ್ಯಾತಿಯ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಾಲಯದಲ್ಲಿ ಸೋಮವಾರ ವಾರ್ಷಿಕ ಷಷ್ಠಿ ಮಹೋತ್ಸವ, ರಥೋತ್ಸವ ಸಹಸ್ರಾರು ಜನರ ಪಾಲ್ಗೊಳ್ಳುವಿಕೆಯೊಂದಿಗೆ ನೆರವೇರಿತು.
ಸೋಮವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ರ ವರೆಗೆ ಮಹಾಧರ್ಮ ನಡೆಯಿತು. ಸಾವಿರಾರು ಜನರು ಪಾಲ್ಗೊಂಡರು. ಮಧ್ಯಾಹ್ನ 12.30 ರಿಂದ ಮಹಾಪೂಜೆ, 1ಕ್ಕೆ ಯಜ್ಞ, ಅಪರಾಹ್ನ 3.30ಕ್ಕೆ ಪೂರ್ಣಾಹುತಿ, 4ಕ್ಕೆ ಯಜ್ಞಾರತಿ ನಡೆಯಿತು. ಬಳಿಕ ಸ್ವರ್ಣಲಾಲ್ಕಿಯಲ್ಲಿ ಬಲಿ ಉತ್ಸವ ಮತ್ತು ಐತಿಹಾಸಿಕ ರಥೋತ್ಸವಕ್ಕೆ ಹೊರಟು ಸಂಜೆ 5ಕ್ಕೆ ಮಹಾ ರಥೋತ್ಸವ ಸಂಪನ್ನಗೊಂಡಿತು. ರಾತ್ರಿ 8.30 ಕ್ಕೆ ರಥಾವರೋಹಣ ನಡೆದು 9.30ಕ್ಕೆ ಮಂಗಳಾರತಿ, ಸಮಾರಾಧನೆ ನಡೆಯಿತು.
ಇಂದು(ಮಂಗಳವಾರ) ಮಧ್ಯಾಹ್ನ 1.30ಕ್ಕೆ ಅವಭೃತ, 2.30ರಿಂದ ಸಂಜೆ 4.30ರ ವರೆಗೆ ಮರದ ಲಾಲ್ಕಿ, ಸಣ್ಣ ರಥೋತ್ಸವಗಳು, 5ಕ್ಕೆ ಶೇಷ ತೀರ್ಥ ಸ್ನಾನ, 6ಕ್ಕೆ ಧ್ವಜಾವರೋಹಣ, 7ಕ್ಕೆ ಗಡಿಪ್ರಸಾದ ವಿತರಣೆ, 9.30ಕ್ಕೆ ಮಹಾಪೂಜೆ, ಬ್ರಾಹ್ಮಣ ಸಂತರ್ಪಣೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.