ಕಾಸರಗೋಡು: ಪ್ರತಿಪಕ್ಷಗಳ ಮುಖಂಡರಿಂದಲೂ ಪ್ರಶಂಸೆಗೆ ಪಾತ್ರವಾಗುವುದರ ಜತೆಗೆ ಬಿಜೆಪಿಯನ್ನು ಜಿಲ್ಲೆಯಲ್ಲಿ ಕಟ್ಟಿಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿರುವವರಲ್ಲಿ ಮಡಿಕೈ ಕಮ್ಮಾರನ್ ಒಬ್ಬರಾಗಿದ್ದರು ಎಂದು ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ವಕೀಲ ಕೆ. ಶ್ರೀಕಾಂತ್ ತಿಳಿಸಿದ್ದಾರೆ.
ಅವರು ಮಡಿಕೈ ಕಲ್ಯಾಣ್‍ನಲ್ಲಿ ಗುರುವಾರ ನಡೆದ ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ, ಮಡಿಕೈ ಕಮ್ಮಾರನ್ ಅವರ ಎರಡನೇ ವರ್ಷದ ಸಂಸ್ಮರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಾಸರಗೋಡು ಜಿಲ್ಲೆ ರಚನೆಗಾಘಿ ನಡೆದ ಹಲವಾರು ಹೋರಾಟಗಳಿಗೆ ನೇತೃತ್ವ ನೀಡಿದ್ದ ಮಡಿಕೈ ಕಮ್ಮಾರನ್ ಅವರು ಯುವ ಪೀಳಿಗೆಗೆ ಆದರ್ಶಪ್ರಾಯರಾಗಿದ್ದಾರೆ ಎಂದು ತಿಳಿಸಿದರು.
ಕೃಷಿಕಮೋರ್ಚಾ ಜಿಲ್ಲಾಧ್ಯಕ್ಷ ಇ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಎ.ವೇಲಾಯುಧನ್, ಬಳಾಲ್ ಕುಞÂಕಣ್ಣನ್, ಎಂ.ಬಾಲರಾಜ್, ಶೋಭನಾ ಏಚಿಕಾನ, ಕೊವ್ವಲ್ ದಾಮೋದರನ್, ಟಿ.ಪಿ ಭಾಸ್ಕರನ್, ಹಿಂದೂ ಐಕ್ಯವೇದಿ ಜಿಲ್ಲಾಧ್ಯಕ್ಷ ಗೋವಿಂದನ್ ಮಾಸ್ಟರ್, ಸಹಕಾರ ಭಾರತಿ ಜಿಲ್ಲಾ ಉಪಾಧ್ಯಕ್ಷ ದಾಮೋದರ ಪಣಿಕ್ಕರ್, ಸತ್ಯನಾಥ್, ಕೆ.ವಿ ಬಾಬು, ಪ್ರೇಮರಾಜ್ ಮುಂತಾದವರು ಉಪಸ್ಥಿತರಿದ್ದರು.