ಕಾಸರಗೋಡು: ತಿರುವನಂತಪುರದಿಂದ ಕಾಸರಗೋಡಿಗೆ ಕೇವಲ ನಾಲ್ಕು ತಾಸು ಕಾಲಾವಧಿಯಲ್ಲಿ ತಲುಪುವ ಅತಿವೇಗದ ಸಿಲ್ವರ್ ಲೈನ್ ರೈಲ್ವೆ ಹಳಿ ನಿರ್ಮಾಣಕ್ಕಾಗಿ ಆಕಾಶಮಾರ್ಗವಾಗಿ ಸಮೀಕ್ಷೆ ಕಾರ್ಯ ಡಿಸೆಂಬರ್ 30ರಂದು ಆರಂಭಗೊಳ್ಳಲಿದೆ.
ಕಾಸರಗೋಡು ಒಳಗೊಂಡಂತೆ ಹನ್ನೊಂದು ಜಿಲ್ಲೆಗಳಲ್ಲಿ ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ನಡೆಸಿ, ಡಿಜಿಟಲ್ ಮಾಹಿತಿ ಸಂಗ್ರಹಿಸಲಾಗುವುದು. ಹೈದರಾಬಾದ್‍ನ ಲಿಯಾನೋ ಸಂಸ್ಥೆ ವೈಮಾನಿಕ ಸಮೀಕ್ಷೆ ಜವಾಬ್ದಾರಿ ವಹಿಸಿಕೊಂಡಿದೆ. ಇದಕ್ಕಾಗಿ ಕೇಂದ್ರ ರಕ್ಷಣಾ ಖಾತೆಯ ಅನುಮತಿಯೂ ಲಭ್ಯವಾಗಿದೆ. ಕಣ್ಣೂರು ಮತ್ತು ತಿರುವನಂತಪುರ ವಿಮಾನ ನಿಲ್ದಾಣ ಕೇಂದ್ರೀಕರಿಸಿ ಸಮೀಕ್ಷೆ ನಡೆಯಲಿದೆ. ಸಮೀಕ್ಷೆ ನಡೆಸುವ ಹೆಲಿಕಾಪ್ಟರ್‍ಗಳಲ್ಲಿ ಲೇಸರ್ ಸ್ಕ್ಯಾನರ್, ಸೆಸ್ ಸೆಟ್ಸ್‍ಗಳನ್ನೂ ಅಳವಡಿಸಲಾಗುವುದು. ಲೈಟ್ ಡಿಟೆನ್ಶನ್ ಏಂಡ್ ರೇಂಜಿಂಗ್ ತಂತ್ರಜ್ಞಾನ ಬಳಸಿಕೊಳ್ಳಲೂ ತೀರ್ಮಾನಿಸಲಾಗಿದೆ.
ಸಮೀಕ್ಷಾ ಕಾರ್ಯಗಳಿಗೆ 1.70ಕೋಟಿ ವೆಚ್ಚ ನಿರೀಕ್ಷಿಸಲಾಗಿದೆ. ಯೋಜನೆಗೆ 56443 ಕೋಟಿ ರೂ. ಅಂದಾಜಿಸಲಾಗಿದ್ದರೂ, ಯೋಜನೆ ಪೂರ್ತಿಗೊಳ್ಳಲು 66079ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ರಾಜ್ಯದ 11ಜಿಲ್ಲೆಗಳ ಮೂಲಕ ಸಿಲ್ವರ್ ಲೈನ್ ರೈಲ್ವೆ ಹಳಿ ಹಾದುಹೋಗಲಿದೆ. ಇಂಡಿಯನ್ ರೈಲ್ವೆ ಹಾಗೂ ಕೇರಳ ಸರ್ಕಾರ ಜಂಟಿಯಾಗಿ ರಚಿಸಿರುವ'ಕೆಆರ್‍ಡಿಸಿಎಲ್'ಮೂಲಕ ಯೋಜನೆ ಜಾರಿಯಾಗಲಿದ್ದು, 2024ರಲ್ಲಿ ಹಳಿ ನಿರ್ಮಾಣ ಕಾರ್ಯ ಪೂರ್ತಿಗೊಳ್ಳಲಿದೆ. ತಿರುವನಂತಪುರದಿಂದ ಕಾಸರಗೋಡಿಗೆ ಪ್ರಸಕ್ತ ರೈಲಿಗೆ 12ತಾಸುಗಳ ಕಾಲಾವಕಾಶ ತಗಲುತ್ತಿದ್ದು, ಹಳಿನಿರ್ಮಾನ ಕಾರ್ಯ ಪೂರ್ತಿಗೊಂಡಲ್ಲಿ 3.52ತಾಸಿನಲ್ಲಿ ಈ ದೂರ ಕ್ರಮಿಸಲು ಸಾಧ್ಯವಾಗಲಿದೆ. ಈ ಮೂಲಕ ಎಂಟು ತಾಸುಗಳ ಉಳಿತಾಯವಾಗಲಿದೆ.