ಕಾಸರಗೋಡು: ಜಿಲ್ಲೆಯ ವಿವಿಧ ರೀತಿಯ ಯೋಜನೆಗಳು ಜಾರಿಗೊಳಿಸಲು, ಅವುಗಳ ನಿರ್ವಹಣೆಯ ಮೇಲ್ನೋಟ ವಹಿಸಲು ಸೇವೆಯಿಂ ನಿವೃತ್ತರಾದ ತಾಂತ್ರಿಕ ಮತ್ತು ತಾಂತ್ರಿಕೇತರ ವಿಭಾಗಗಳ ಸಿಬ್ಬಂದಿಯನ್ನು ಒಳಗೊಳಿಸಿ ಡಾಟಾಬೇಸ್ ಸಿದ್ಧಪಡಿಸಲು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ಸಮಿತಿ ಆಡಳಿತಾನುಮತಿ ನೀಡಿದೆ.
56 ನಾಟ್ ಔಟ್ ಎಂಬ ನಾಮಧೇಯದಲ್ಲಿ ಈ ಯೋಜನೆ ಜಾರಿಗೊಳ್ಳಲಿದ್ದು, ನಿವೃತ್ತ ಸಿಬ್ಬಂದಿಯ ಡಾಟಾಬೇಸ್ ಸಿದ್ಧಪಡಿಸಲಾಗುವುದು. 56ನೇ ವಯೋಮಾನದಲ್ಲಿ ನಿವೃತ್ತರಾದವರ ಸೇವೆಯನ್ನು ಸಮಾಜಕ್ಕೆ ಮತ್ತೆ ಒದಗಿಸುವ ಉದ್ದೇಶದೊಂದಿಗೆ ಈ ಯೋಜನೆ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಈ ಮೂಲಕ ಜಿಲ್ಲೆಯ ಬಹುತೇಕ ಯೋಜನೆಗಳನ್ನು ಸೂಕ್ತ ಅವಧಿಯಲ್ಲೇ ಪೂರ್ಣಗೊಳಿಸುವುದು ಇಲ್ಲಿನ ಪ್ರಧಾನ ಉದ್ದೇಶ. ಯೋಜನೆಸಿದ್ಧತೆ, ಯೋಜನೆಯ ವರದಿ ನಿರ್ವಹಣೆ, ಮೇಲ್ನೋಟ, ಮೋನಿಟರಿಂಗ್ ಇತ್ಯಾದಿಗಳಿಗೆ ಪೂರಕವಾಗುವಂತೆ ನೋಡಿಕೊಳ್ಳುವುದು. ಈ ಮಂದಿಯ ಪಟ್ಟಿ ಸಿದ್ಧಪಡಿಸಿ ವಿವಿಧ ಇಲಾಖೆಗಳಿಗೆ, ಸ್ಥಳೀಯಾಡಳಿತೆ ಸಂಸ್ಥೆಗಳಿಗೆ, ಸಾರ್ವಜನಿಕರಿಗೆ ಸಿಗುವಂತೆ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು. ಈ ಹಿನ್ನೆಲೆಯಲ್ಲಿ 5 ವರ್ಷಗಳ ಅವಧಿಯಲ್ಲಿ ಸೇವೆಯಿಂದ ನಿವೃತ್ತರಾದವರ ಹೆಸರನ್ನುಹೆಸರನ್ನುksdkdp@gmail.comಎಂಬ ಈ-ಮೇಲ್ ವಿಳಾಸಕ್ಕೆ ಕಳುಹಿಸುವಂತೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ತಿಳಿಸಿದರು.