ಕಾಸರಗೋಡು: ಜಿಲ್ಲೆಯಲ್ಲಿ ನಡೆಯುತ್ತಿರುವ 60ನೇ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಯಶಸ್ವಿಗೆ ಅಹೋರಾತ್ರಿ ದುಡಿಯುತ್ತಿರುವವರಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರ ಕೊಡುಗೆ ಸಣ್ಣದಲ್ಲ.
ಜಿಲ್ಲೆಯ ಸುಮಾರು 1500 ಹೈಯರ್ ಸೆಕೆಂಡರಿ ಎನ್.ಎಸ್.ಎಸ್. ಸ್ವಯಂಸೇವಕರು ವಿವಿಧ ಉಪಸಮಿತಿಗಳ ಸ್ವಾಮ್ಯದಲ್ಲಿ ವಿಶ್ರಾಂತಿಯಲ್ಲದೆ ಚಟುವಟಿಕೆ ನಡೆಸುತ್ತಿದ್ದಾರೆ. 28 ವರ್ಷಗಳ ನಂತರ ಜಿಲ್ಲೆಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಶಾಲಾ ಕಲೋತ್ಸವವನ್ನು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಈ ವಿದ್ಯಾರ್ಥಿಗಳ ಶ್ರಮ ಸಾರ್ಥಕವಾಗಿದೆ. ಕಾರ್ಯಕ್ರಮ ಸಮಿತಿಯ ಅಂಗವಾಗಿ ಪ್ರತಿವೇದಿಕೆಗಳಲ್ಲಿ ತಲಾ 4 ಮಂದಿ ಸ್ವಯಂಸೇವಕರು ಸ್ಟೇಜ್ ಮೆನೇಜರರ ಸಹಾಯಕರಾಗಿದ್ದಾರೆ. ಭೋಜನಾಲಯದಲ್ಲಿ ಆಹಾರ ಬಡಿಸುವಿಕೆಯಿಂದ ಹಿಡಿದು ಭೋಜನಕ್ಕಾಗಿ ಸಾಲುನಿಲ್ಲುವವರ ನಿಯಂತ್ರಣ ವರೆಗೆ ಶಿಸ್ತನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಹಸುರು ಸಂಹಿತೆ ಅಂಗವಾಗಿ ವೇದಿಕೆ ಮತ್ತು ಆಸುಪಾಸಿನ ಪ್ರದೇಶಗಳನ್ನು ಶುಚೀಕರಣಗೊಳಿಸುವ ನಿಟ್ಟಿನಲ್ಲಿ, ಕಾನೂನು ಭಂಗ ನಿಯಂತ್ರಿಸುವಲ್ಲಿ ಪೆÇಲೀಸರಿಗೆ ಸಹಕಾರ ನೀಡುತ್ತಿದ್ದಾರೆ. ಹೊಸದುರ್ಗ, ಇಕ್ಬಾಲ್, ಬಲ್ಲ ಈಸ್ಟ್, ರಾಜಾಸ್, ಇಪ್ಪಿಲಕೈ, ಮಡಿಕೈ, ಕಕ್ಕಾಡ್, ಚಾಯೋತ್, ಕುಟ್ಟಮತ್, ಪಾಕಂ, ಪೆರಿಯ, ಚೆಮ್ನಾಡ್, ಚೀಮೇನಿ ಸಹಿತ ಶಾಲೆಗಳ ಎನ್.ಎಸ್.ಎಸ್. ಸ್ವಯಂ ಸೇವಕರು ದುಡಿಯುತ್ತಿದ್ದಾರೆ. ಇವರ ಚಟುವಟಕೆಗಳಿಗೆ ಜಿಲ್ಲಾ ಸಂಚಾಲಕ ವಿ.ಹರಿದಾಸ್, ಪಿ.ಎ.ಸಿ. ಸದಸ್ಯ ರಾಜೀವನ್ ಮಡಿಯಿಲ್ಲತ್, ಕಾರ್ಯಕ್ರಮ ಅಧಿಕಾರಿಗಳಾದ ಸಿ.ಕೆ.ಅಜಿತ್, ವಿದ್ಯಾ ಸೂರಜ್, ವಿ.ಇ.ಅನುರಾಧ, ಪಿ.ವಿ.ಸೌಮ್ಯಾ, ಕೆ.ಬಾಬು, ಕೆ.ವಿ.ರಮಣಿ, ಸೌಮ್ಯಾ ಚಾಕೋ, ಇ.ಶ್ರೀನಾಥ್ ನೇತೃತ್ವ ನೀಡಿದರು.