HEALTH TIPS

ಜಾಗತಿಕ ದಾಖಲೆ ಬರೆದ ಮುಗಿಲೆತ್ತರದ ಅರಬ್ ರಾಷ್ಟ್ರ ಧ್ವಜ

   
      ದುಬೈ: ಸಂಯುಕ್ತ ಅರಬ್ ಸಂಸ್ಥಾನದಲ್ಲಿ ರಾಷ್ಟ್ರೀಯ ದಿನದ ಸಂಭ್ರಮ ಅಚ್ಚರಿಗೊಳಿಸಿತು. 1971ರ ವರ್ಷದ ಡಿಸೆಂಬರ್ 2ರಂದು ಆಗಿನ ಸ್ಥಾಪಕಧ್ಯಕ್ಷ ಶೇಕ್ ಝಾಯಿದ್ ಬಿನ್ ಸುಲ್ತಾನ್ ಅಲ್ ನಹಿಯಾನ್ ಮುಂದಾಳುತ್ವದಲ್ಲಿ ಸಂಯುಕ್ತ ಅರಬ್ ಸಂಸ್ಥಾನ ರೂಪುಗೊಂಡಿತ್ತು. ಇದು ಏಳು ರಾಜ್ಯಗಳನ್ನೊಳಗೊಂಡ ಒಕ್ಕೂಟವಾಗಿದೆ.
     ಆಗ ಈ ಯುಎಇಯನ್ನು ಅಬುಧಾಬಿ, ಅಜ್ಮಾನ್, ಫುಜೆರ,ದುಬೈ, ಶಾರ್ಜಾ, ರಾಸ್ ಅಲ್ ಖೈಮಾ, ಉಮ್ಮಲ್ ಖೈಮ್ ಎಂಬ ಏಳು ಸಂಸ್ಥಾನಗಳಾಗಿ ವಿಂಗಡಣೆಯಾಯಿತು. ಆ ದಿನವನ್ನು ಸಂಯುಕ್ತ ಅರಬ್ ಸಂಸ್ಥಾನದ ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ. ವರ್ಷ ಡಿಸೆಂಬರ್ 1-3ರ ವರೆಗೆ ಸಂಯುಕ್ತ ಅರಬ್ ಸಂಸ್ಥಾನದ ರಾಷ್ಟ್ರೀಯ ದಿನ ಎಂದು ಆಚರಿಸಲಾಗುತ್ತದೆ. ಅಂದು ದೇಶವ್ಯಾಪ್ತಿ ಸರಕಾರಿ ಕಛೇರಿ, ಕಟ್ಟಡ ಹಾಗೂ ರಸ್ತೆಗಳ ಎರಡೂ ಬದಿಗಳಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ.ಮಾತ್ರವಲ್ಲದೇ ಈ ಮೂರು ದಿನವನ್ನು ಸರಕಾರಿ ರಜಾ ದಿನವಾಗಿ ಪಾಲನೆ ಮಾಡಲಾಗುತ್ತದೆ. ಚತುರ್ವರ್ಣ ಪತಾಕೆ ಕೆuಟಿಜeಜಿiಟಿeಜಲ್ಲಿ ರಾಷ್ಟ್ರದ ಬೀದಿ ಬೀದಿಗಳಲ್ಲಿ ರಾರಾಜಿಸುತ್ತವೆ. ಯುಎಇ ಜನತೆ ಸಂಭ್ರಮದಲ್ಲಿ ಈ ದಿನವನ್ನು ಕಳೆಯುತ್ತಾರೆ. ಯುಎಇಯಾ ನಾನಾ ಭಾಗಗಳಲ್ಲಿ ಇಲ್ಲಿನ ಕಲೆ ಸಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತದೆ.
        ದಾಖಲೆ ನಿರ್ಮಿಸಿದ ರಾಷ್ಟ್ರಧ್ವಜ:
    ರಾಷ್ಟ್ರೀಯ ದಿನದ ಹಿನ್ನೆಲೆಯಲ್ಲಿ ಅರಬ್‍ನಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಗಳು ರಂಗೇರುತ್ತಿದೆ. ಅಬುಧಾಬಿ ಯುಎಇ ರಾಷ್ಟ್ರದ ರಾಜ್ಯಧಾನಿಯಾಗಿದ್ದು ಎತ್ತ ನೋಡಿದರೂ ಸಂಭ್ರಮಗಳೇ ಕಾಣುತ್ತಿವೆ. ರಜಾದಿನವಾದ ಕಾರಣ ಕೋಟ್ಯಾಂತರ ಮಂದಿ ತಮ್ಮನ್ನು ಸಂಭ್ರಮದ ಕಡಲಲ್ಲಿ ಮಿಂದೆದ್ದಿದ್ದಾರೆ. ಮೊದಲ ದಿನ ಸ್ಕೈಡೈವರ್ಸ್ ಮುಗಿಲೆತ್ತರದಿಂದ ಅರಬ್‍ನ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಸಾವಿರಾರು ಅಡಿ ಎತ್ತರವಿರುವ ಈ ಧ್ವಜವನ್ನು ಹಿಡಿದು ಬಾನಿನಿಂದ ಜಿಗಿದಿದ್ದಾರೆ. ಇದು ವಿಶ್ವದ ಅತೀ ದೊಡ್ಡ ಮತ್ತು ಮುಗಿಲೆತ್ತರದಿಂದ ಹಾರಾಡಿದ ಮೊದಲ ರಾಷ್ಟ್ರಧ್ವಜವಾಗಿದೆ.
    ನಾಲ್ಕು ಬಣ್ಣಗಳಿಂದ ಕೂಡಿದ ಅಲ್ಲಿನ ರಾಷ್ಟ್ರಧ್ವಜ ಸಿದ್ಧಪಡಿಸಲಾಗಿದೆ. ಹಸಿರು, ಬಿಳಿ, ಕಪ್ಪು, ಕೆಂಪು ಬಣ್ಣದಿಂದ ತಯಾರಿಸಲಾಗಿದೆ. ಹಸಿರು-ಫಲವತ್ತತೆ, ಬಿಳಿ-ತಟಸ್ಥ ನೀತಿ (ಧೋರಣೆ), ಕಪ್ಪು-ತೈಲ ಸಂಪತ್ತು, ಕೆಂಪು-ರಕ್ತ ಮತ್ತು ಖಡ್ಗ ಎಂಬ ಸಂಕೇತದಿಂದ ಅದನ್ನು ವರ್ಣಿಸಲಾಗುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries