ಮುಳ್ಳೇರಿಯ: ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಹೈಯರ್ ಸೆಕೆಂಡರಿ ವಿಭಾಗದ ವಯಲಿನ್ ಸ್ಪರ್ಧೆಯಲ್ಲಿ ಬೋವಿಕ್ಕಾನ ಬಿ.ಎ.ಆರ್. ಹೈಯರ್ ಸೆಕೆಂಡರಿ ಶಾಲೆಯ ಸುಪ್ರೀತ ಪಿ.ಎಸ್. `ಎ' ಗ್ರೇಡ್ ಪಡೆದಿದ್ದಾಳೆ. ಗಣರಾಜ ಕಾರ್ಲೆ ಅವರ ಬಳಿ ವಯಲಿನ್ ಅಭ್ಯಾಸ ಮಾಡುತ್ತಿರುವ ಈಕೆ ಅಧ್ಯಾಪಕರಾದ ಸುಬ್ರಹ್ಮಣ್ಯ ಭಟ್ ಹಾಗೂ ವತ್ಸಲಾ ದಂಪತಿಯ ಪುತ್ರಿ. ವಿಜೇತೆಯನ್ನು ಶಾಲಾ ರಕ್ಷಕ ಶಿಕ್ಷಕ ಸಂಘ ಹಾಗೂ ಅಧ್ಯಾಪಕ ವೃಂದ ಅಭಿನಂದಿಸಿದೆ.
ವಂಜಿಪ್ಪಾಟ್ ನಲ್ಲಿ ಎ ಗ್ರೇಡ್:
ಮುಳ್ಳೇರಿಯ: ಕೇರಳ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಹೈಯರ್ ಸೆಕೆಂಡರಿ ವಿಭಾಗದ ವಂಜಿಪ್ಪಾಟ್ ಸ್ಪರ್ಧೆಯಲ್ಲಿ ಬೋವಿಕ್ಕಾನ ಬಿ.ಎ.ಆರ್. ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯರ ತಂಡ `ಎ' ಗ್ರೇಡ್ ಪಡೆದಿದೆ.