ಮುಳ್ಳೇರಿಯ: ಮುಳ್ಳೇರಿಯದ ಕಯ್ಯಾರ ಕಿಂಞಣ್ಣ ರೈ ಗ್ರಂಥಾಲಯದ ಸಹಭಾಗಿತ್ವದಲ್ಲಿ ಗ್ರಾಮ ವಿಸ್ತರಣಾಧಿಕಾರಿ(ವಿ.ಇ.ಒ) ಮಾದರಿ ಪರೀಕ್ಷೆ ನಡೆಸಲಾಯಿತು. ಅತಿ ಹೆಚ್ಚು ಅಂಕ ಗಳಿಸಿದ ಮೂವರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನ ವಿತರಣೆಯನ್ನು ಆಶೋಕ ಅರಳಿತ್ತಾಯ ನಿವ9ಹಿಸಿದರು. ಬಿ.ಸಿ.ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅಶೋಕನ್ ಕರ್ಮ0ತೋಡಿ, ಚಂದ್ರನ್ ಮೊಟ್ಟಮ್ಮಲ್, ಗುರುವಾಯೂರಪ್ಪ ಭಟ್ ಮೊದಲಾದವರು ಮಾತನಾಡಿದರು.
ಪ್ರಶ್ನೆ ಪತ್ರಿಕೆ ವಿಶ್ಲೇಷಣೆ ಯನ್ನು ಮಿದೇಶ್ ಪಣಿಯಾಲ ನಿವ9ಹಿಸಿ, ಸದಾನಂದ ಮಿಂಚಿಪದವು ವಂದಿಸಿದರು. ಗ್ರಂಥಾಲಯದ ನಿರ್ವಾಹಕ ಕೆ.ಕೆ.ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾದರಿ ಪರೀಕ್ಷೆಯಲ್ಲಿ ಸೋನಿ ಕರ್ಮ0ತೋಡಿ ಪ್ರಥಮ, ಜಯಕುಮಾರ್ ಅಂಗಡಿಮೊಗರು ದ್ವಿತೀಯ ಹಾಗೂ ರೇಷ್ಮಾ ಕರ್ಮ0ತೋಡಿ ತೃತೀಯ ಬಹುಮಾನಗಳನ್ನು ಪಡೆದರು. ಗಣ್ಯರು ಬಹುಮಾನಗಳನ್ನು ವಿತರಿಸಿದರು.