ಕಾಸರಗೋಡು: ಮಧೂರು ಸನಿಹದ ಉಳಿಯತ್ತಡ್ಕ ಶ್ರೀ ಶಕ್ತಿ ಭಜನಾಮಂದಿರ ವಠಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀಶಕ್ತಿ ಸಭಾ ಭವನದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಧನ ಹಾಗೂ ಸಾಮಗ್ರಿ ಸಂಗ್ರಹದ ಭಾಗವಾಗಿ ಪ್ರಕಟಿಸಿರುವ ವಿನಂತಿಪತ್ರದ ಬಿಡುಗಡೆ ಸಮಾರಂಭ ಡಿಸೆಂಬರ್ 15ರಂದು ಬೆಳಗ್ಗೆ 10ಕ್ಕೆ ಮಂದಿರ ವಠಾರದಲ್ಲಿ ಜರುಗಲಿದೆ.
ಮಂದಿರ ಸಭಾಭವನ ಪ್ರವೇಶೋತ್ಸವದ ಸ್ವಾಗತ ಸಮಿತಿ ರಕ್ಷಾಧಿಕಾರಿ, ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಪತ್ರಿಕೆ ಬಿಡುಗಡೆಗೊಳಿಸುವರು. ಸ್ವಾಗತ ಸಮಿತಿ ಅಧ್ಯಕ್ಷ ತಾರಾನಾಥ ಮಧೂರು, ಆರ್ಥಿಕ ಸಮಿತಿ ಅಧ್ಯಕ್ಷ ಕೆ.ಎನ್ ವೆಂಕಟ್ರಮಣ ಹೊಳ್ಳ ಮುಂತಾದವರು ಪಾಲ್ಗೊಳ್ಳುವರು. ಈ ಬಗ್ಗೆ ಮಂದಿರದಲ್ಲಿ ನಡೆದ ಅವಲೋಕನಾ ಸಭೆಯಲ್ಲಿ ತಾರಾನಾಥ ಮಧೂರು ಅಧ್ಯಕ್ಷತೆ ವಹಿಸಿದ್ದರು. ಸಂತೋಷ್ ಗಟ್ಟಿ, ಬಿ.ಬಾಲಕೃಷ್ಣ ಅಗ್ಗಿತ್ತಾಯ, ಉದಯ ಕುಮಾರ್ ಮನ್ನಿಪ್ಪಾಡಿ, ಯು.ಗೋಪಾಲ, ರಾಧಾಕೃಷ್ಣ ಉಳಿಯತ್ತಡ್ಕ, ದಿನೇಶ್ ಬಂಬ್ರಾಣ, ನವೀನ್ಕುಮಾರ್ ಶೆಟ್ಟಿ, ರತೀಶ್, ಮಣಿ, ಮನೀಶ್, ಐತ್ತಪ್ಪ, ಉಮೇಶ್ ಮನ್ನಿಪ್ಪಾಡಿ ಉಪಸ್ಥಿತರಿದ್ದರು.