HEALTH TIPS

ಮಲಾಲಾಗೆ ವಿಶ್ವಸಂಸ್ಥೆಯಿಂದ ಮತ್ತೊಂದು ಮಹತ್ವದ ಗೌರವ

       
    ನ್ಯೂಯಾರ್ಕ್:  ನೊಬೆಲ್  ಶಾಂತಿ   ಪ್ರಶಸ್ತಿ  ಪುರಸ್ಕೃತೆ   ಪಾಕಿಸ್ತಾನದ ಕಿರಿಯ ಮಾನವ ಹಕ್ಕುಗಳ ಹೋರಾಟಗಾರ್ತಿ  ಮಲಾಲಾ ಯೂಸಫ್ ಝೈ  ಮತ್ತೊಂದು  ಮಹತ್ವದ  ಗೌರವಕ್ಕೆ  ಭಾಜನರಾಗಿದ್ದಾರೆ.
   ಜಗತ್ ಪ್ರಸಿದ್ದ  ಟೀನೆಜ್  ಯುವತಿಯೆಂದು  ಆಕೆಯನ್ನು  ಪರಿಗಣಿಸಲಾಗಿದೆ. 21 ನೇ ಶತಮಾನದ ಎರಡನೇ ದಶಕದಲ್ಲಿ,   ಪ್ರಸಿದ್ದ  ಟೀನೇಜರ್ ಆಗಿ ಮಲಾಲಾ  ಆಯ್ಕೆಯಾಗಿದ್ದು, 2010 ರಿಂದ 2019 ರ ಮಧ್ಯ ಕಾಲದಲ್ಲಿ  ಮಲಾಲಾ ಗೆ   ದೊರೆತ  ಮಾನ್ಯತೆ ಆಧಾರದ ಮೇಲೆ ವಿಶ್ವಸಂಸ್ಥೆ   ಈ  ಗೌರವವನ್ನು  ನೀಡಿದೆ.
   ಈ ಸಂಬಂಧ ವಿಶ್ವಸಂಸ್ಥೆ  ಗುರುವಾರ ಹೇಳಿಕೆ ನೀಡಿದೆ. ಪಾಕಿಸ್ತಾನದಲ್ಲಿ ಬಾಲಕಿಯರ ಶಿಕ್ಷಣಕ್ಕಾಗಿ ಮಲಾಲಾ ನಡೆಸಿರುವ  ಹೋರಾಟವನ್ನುವಿಶ್ವಸಂಸ್ಥೆ   ಸ್ಮರಿಸಿದೆ. ಪುಟ್ಟ ವಯಸ್ಸಿನಿಂದಲೂ ಮಲಾಲಾ ಬಾಲಕಿಯರ ಶಿಕ್ಷಣದ ಬಗ್ಗೆ ಮಾತನಾಡಿದ್ದಾರೆ ಮತ್ತು ತಾಲಿಬಾನ್ ವಿರುದ್ಧ ಹೋರಾಡಿದ್ದಾರೆ. ಈ ಪ್ರಯತ್ನಗಳಿಗಾಗಿ  ಆಕೆಗೆ 2014 ರಲ್ಲಿ ನೊಬೆಲ್  ಶಾಂತಿ ಪುರಸ್ಕಾರ, 2017 ರಲ್ಲಿ  ವಿಶ್ವಸಂಸ್ಥೆ  ಕಿರಿಯ ಶಾಂತಿದೂತೆ ಎಂದೂ ಹೆಸರಿಸಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries