ಬದಿಯಡ್ಕ: ಕೆನರ ಅಭಿವೃದ್ಧಿ ಮತ್ತು ಶಾಂತಿ ಸಂಸ್ಥೆ ಮಂಗಳೂರು ಮತ್ತು ಸಿ.ಇ.ಐ. ಸಂಸ್ಥೆಯ ಜಂಟಿ ಆಶ್ರಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ ಜಾಗ್ರತಿ ಕಾರ್ಯಾಗಾರ ಬದಿಯಡ್ಕ ಹೋಲಿ ಪ್ಯಾಮಿಲಿ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ವಿದ್ಯಾರ್ಥಿಗಳಿಗೆ ನಡೆಸಿದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸವಿತಾ ಅವರು ಉದ್ಘಾಟಿಸಿ ನಮ್ಮ ಶಾಲಾ ಪರಿಸರ ಮತ್ತು ಮನೆಯ ಪರಿಸರವನ್ನು ಸ್ವಚ್ಛತೆಗೊಳಿಸಲು ವಿದ್ಯಾರ್ಥಿಗಳಿಗೆ ಮಹತ್ತರ ಜವಬ್ದಾರಿ ಇದೆ. ಅದನ್ನು ಪಾಲಿಸುವಂತೆ ಕರೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಸಿ.ಒ.ಡಿ.ಪಿ. ಸಂಸ್ಥೆಯ ತರಬೇತಿ ಸಂಯೋಜಕಿ ಲಿನೆಟ್ ಗೊನ್ಸಾಲ್ವಿಸ್ ಅವರು ಆಧುನಿಕ ಪ್ರಪಂಚದಲ್ಲಿ ಪ್ಲಾಸ್ಟಿಕ್‍ನಿಂದ ಉಂಟಾಗುವ ದುಷ್ಪರಿಣಾಮ, ಪರಿಸರವನ್ನು ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಮಾಡಬೇಕಾದ ಅಗತ್ಯತೆ, ಪರಿಹಾರ ಮಾರ್ಗಗಳು, ಸ್ವಚ್ಛತೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿದರು. ಸಿ.ಒ.ಡಿ.ಪಿ, ಸಂಸ್ಥೆಯ ಸಂಯೋಜಕ ಪೀಟರ್ ಪೌಲ್ ಹಾಗೂ ಕಾರ್ಯಕರ್ತೆ ಆಶಾರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.