ಕುಂಬಳೆ: ಅಂಕಪಟ್ಟಿ-ಸರ್ಟಿಫಿಕೇಟ್ ಇದೆ ಎಂಬ ಮಾತ್ರಕ್ಕೆ ಒಬ್ಬ ಉತ್ತಮ ಗುರುವಾಗಲಾರ. ಶಿಷ್ಯರ ಮನದಲ್ಲಿ ಜಾಗ ಹಿಡಿದುಕೊಳ್ಳುವವನೇ ನಿಜವಾದ ಗುರು ಎಂಬುದಾಗಿ ನಾಟ್ಯ ವಿದುಷಿ ವಿದ್ಯಾಲಕ್ಷ್ಮೀ ಕುಂಬಳೆ ಅವರು ಹೇಳಿದರು.
`ಊರ ಪ್ರತಿಭೆಗಳೊಂದಿಗೆ ಸಂವಾದ' ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಹೋಲಿ ಫ್ಯಾಮಿಲಿ ಶಾಲೆಯ ವಿದ್ಯಾರ್ಥಿಗಳು ಅವರ ನಿವಾಸದಲ್ಲಿ ಭೇಟಿಯಾದರು. ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತಂದು ಬೆಳೆಸುವುದೇ ಒಂದು ಗುರುವಿನ ಪ್ರತಿಭೆ ಎಂಬುದಾಗಿ ಅವರು ಹೇಳಿದರು. ಇತರ ನಾಟ್ಯ ಕಲೆಗಳಲ್ಲಿ ಭರತನಾಟ್ಯದ ಅಂಶಗಳಿರುವುದನ್ನು ತಿಳಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಜಯಶೀಲ, ಸಿಸ್ಟರ್ ಸುನೀತಾ ಹಾಗು ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿದರು. ಶಶಿಕಲಾ ಟೀಚರ್ ಅವರನ್ನು ಪರಿಚಯಿಸಿದರು. ವಿದ್ಯಾರ್ಥಿನಿ ದಿವ್ಯಾ ವಂದಿಸಿದರು. ಪ್ರಸಾದ್ ಉಪಸ್ಥಿತರಿದ್ದರು.