ಕಾಸರಗೋಡು: ಹಿಂಬದಿ ಸವಾರರು ಕಡ್ಡಾಯ ಹೆಲ್ಮೆಟ್ ಧರಿಸಬೇಕೆಂಬ ಹೈಕೋರ್ಟು ಆದೇಶ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾದ್ಯಂತ ಮೋಟಾರುವಾಹನ ಇಲಾಖೆ ಮತ್ತು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. ನಾಲ್ಕು ವರ್ಷಕ್ಕಿಂತ ಮೇಲಿನ ಹರೆಯದ ಮಕ್ಕಳೂ ಬೈಕ್ ಸಂಚಾರದ ಸಂದರ್ಭ ಹೆಲ್ಮೆಟ್ ಧರಿಸುವಂತೆ ಆದೇಶಿಸಲಾಗಿದ್ದು, ತಪ್ಪಿದಲ್ಲಿ ದಂಡ ಪಾವತಿಸಬೇಕಾಗುತ್ತದೆ. ಆರಂಭದಲ್ಲಿ 500ರೂ. ದಂಡ ವಿಧಿಸಲಾಗುವುದ, ನಂತರ ಪುನರಾವರ್ತನೆಯಾದಲ್ಲಿ, ಲೈಸನ್ಸ್ ರದ್ಧತಿಯೂ ನಡೆಯಲಿರುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ನಡೆಸುವವರನ್ನು ಹಿಂಬಾಲಿಸಿ ಸೆರೆಹಿಡಿಯದೆ, ಬೈಕ್‍ನಂಬರ್ ದಾಖಲಿಸಿ ಅವರಿಗೆ ನೋಟೀಸು ಜಾರಿಗೊಳಿಸುವಂತೆ ಹೈಕೋರ್ಟು ಆದೇಶಿಸಿತ್ತು. ಹೈಕೋರ್ಟು ಆದೇಶದನ್ವಯ ಜಿಲ್ಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ, ಸವಾರರಲ್ಲಿ ಜಾಗೃತಿ ಮೂಡಿಸಿದರು.