ಬದಿಯಡ್ಕ: ನೀರ್ಚಾಲು ಶ್ರೀಧರ್ಮಶಾಸ್ತಾ ಸೇವಾ ಸಮಿತಿ ಆಶ್ರಯದಲ್ಲಿ ಇಂದು(ಶನಿವಾರ) ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಭಜನೋತ್ಸವ ನಡೆಯಲಿದೆ.
ಸಂಜೆ 6ಕ್ಕೆ ಶ್ರೀಧಾಮ ಮಾಣಿಲದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಗಮಿಸುವರು. ಬಳಿಕ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ.
....................................................................................................................................................................
ಅಡ್ಕದಲ್ಲಿ ಅಯ್ಯಪ್ಪ ಭಜನೋತ್ಸವ ಇಂದು
ಉಪ್ಪಳ: ಅಡ್ಕ ಅಶೋಕನಗರದ ಶ್ರೀಅಯ್ಯಪ್ಪ ಸೇವಾ ಸಂಘದ ಆಶ್ರಯದಲ್ಲಿ 44ನೇ ವಾರ್ಷಿಕ ಉತ್ಸವದ ಅಂಗವಾಗಿ ಶ್ರೀಅಯ್ಯಪ್ಪ ಭಜನೋತ್ಸವ, ಶ್ರೀಸತ್ಯನಾರಾಯಣ ಪೂಜೆ ಇಂದು(ಶನಿವಾರ) ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ 7 ರಿಂದ ಗಣಹೋಮ, 10ಕ್ಕೆ ಶ್ರೀಸತ್ಯನಾರಾಯಣ ಪೂಜಾರಂಭ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4 ರಿಂದ ಭಜನೆ ಆರಂಭಗೊಳ್ಳಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 9 ರಿಂದ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಲಿದೆ.
...................................................................................................................................................................