ಬದಿಯಡ್ಕ: ಬದಿಯಡ್ಕ, ವಿದ್ಯಾಗಿರಿ, ಏತಡ್ಕ ದಾರಿಯಾಗಿ ಕಿನ್ನಿಂಗಾರು ರಸ್ತೆಯಲ್ಲಿ ಸಂಚರಿಸುತ್ತಿರುವ ಏಕೈಕ ಬಸ್‍ನ ಮುಂಭಾಗದಿಂದಲೇ ಖಾಸಗಿ ವಾಹನಗಳು, ಅಟೋರಿಕ್ಷಾಗಳು ಬಸ್‍ಗೆ ಕಾಯುತ್ತಿದ್ದ ಜನರನ್ನು ಹತ್ತಿಸಿಕೊಂಡು ಹೋಗುತ್ತಿರುವುದಾಗಿ ಬಸ್ ಸಿಬ್ಬಂದಿಗಳು ದೂರಿದ್ದಾರೆ. ಈಗಾಗಲೇ ನಷ್ಟದಿಂದ ಬಸ್ ಓಡುತ್ತಿದ್ದು, ಈ ಘಟನೆಗಳಿಂದಾಗಿ ಸಿಗುವ ಅಲ್ಪ ಆದಾಯಕ್ಕೂ ಹಿನ್ನಡೆಯುಂಟಾಗುತ್ತಿದೆ. ಗ್ರಾಮೀಣ ಪ್ರದೇಶವಾದ ಇಲ್ಲಿ ಅನೇಕ ವರ್ಷಗಳಿಂದ ರಸ್ತೆಯು ತೀರಾ ಹದಗೆಟ್ಟಿದ್ದು ವಾಹನ ಸಂಚಾರವೇ ದುಸ್ತರವಾಗಿದೆ. ದುರಸ್ತಿಗೊಳ್ಳದ ಈ ಏತಡ್ಕ, ಕಿನ್ನಿಂಗಾರು ರಸ್ತೆಯಲ್ಲಿ ಸಂಚರಿಸುವ ಏಕೈಕ ಬಸ್ ಇದಾಗಿದೆ. ಕೆಲವೊಂದು ಬಾರಿ ಪ್ರಯಾಣಿಕರಿಲ್ಲದೆ ಖಾಲಿ ಸಂಚರಿಸಬೇಕಾದ ಪರಿಸ್ಥಿತಿಯಿದೆ. ರಸ್ತೆ ಹದಗೆಟ್ಟ ಹಿನ್ನೆಲೆಯಲ್ಲಿ ಕಿನ್ನಿಂಗಾರು ತನಕ ಬೆಳಗ್ಗೆ ಮತ್ತು ಸಂಜೆ ಹಾಗೂ ಏತಡ್ಕ ತನಕ ಸಂಚರಿಸುತ್ತಿದೆ. ಏತಡ್ಕ ತನಕದ ರಸ್ತೆಯ ದುರಸ್ತಿಗಾಗಿ ಹಲವಾರು ಚಳುವಳಿ ಕೈಗೊಳ್ಳಲಾಗಿತ್ತು. ಪ್ರಸ್ತುತ ಹದಗೆಟ್ಟ ರಸ್ತೆಯನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಪ್ರಯಾಣಿಕರಿಗಿದೆ. ಇರುವ ಒಂದು ಬಸ್ ನಷ್ಟದ ಕಾರಣವನ್ನು ಮುಂದಿಟ್ಟು ಸಂಚಾರವನ್ನು ಮೊಟಕುಗೊಳಿಸಿದರೆ ನಿತ್ಯ ಪ್ರಯಾಣಿಕರಿಗೆ ತೊಂದರೆಯುಂಟಾಗಲಿದೆ.
ಜನರನ್ನು ಹೇರಿಕೊಂಡು ಹೋಗುವ ಟ್ಯಾಕ್ಸಿ ಚಾಲಕರಿಂದ ನಷ್ಟ-ಖಾಸಗಿ ಬಸ್ ಸಿಬ್ಬಂದಿಗಳ ದೂರು
0
ಡಿಸೆಂಬರ್ 06, 2019