ಬದಿಯಡ್ಕ: ರಾಜ್ಯಮಟ್ಟದ ವಿಜ್ಞಾನೋತ್ಸವದಲ್ಲಿ ಗಣಿತ ಶಾಸ್ತ್ರ ವಿಭಾಗದ ನಂಬರ್ ಚಾರ್ಟ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಫಿದಾಫಾತಿಮಾಳನ್ನು ಬದಿಯಡ್ಕ ಗ್ರಾಮಪಂಚಾಯಿತಿಯ ನೂತನ ಕುಟುಂಬಶ್ರೀ ಹಾಲ್ ಉದ್ಘಾಟನಾ ಸಮಾರಂಭದಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಕುಟಂಬಶ್ರೀ ವತಿಯಿಂದ ಕೊಡಮಾಡಿದ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು.
ಈಕೆ ಪತ್ರಕರ್ತ, ಅಧ್ಯಾಪಕ ಹಸನ್ ಬದಿಯಡ್ಕ ಹಾಗೂ ಅನ್ನತ್ ದಂಪತಿಗಳ ಪುತ್ರಿ. ಸಮಾರಂಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಕಾರ್ಯದರ್ಶಿ, ಗ್ರಾಮಪಂಚಾಯಿತಿ ಸದಸ್ಯರು, ವಿವಿಧ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.