ಕಾಸರಗೋಡು: ನೂತನ ವರ್ಷದಲ್ಲಿ ಕಾಸರಗೋಡಿಗೆ ಕೊಡುಗೆ ರೂಪದಲ್ಲಿ ಸಿಗಲಿರುವುದು ನೂತನ ಟೆನ್ನಿಸ್ ಕೋರ್ಟ್. ಜಿಲ್ಲ ಕ್ರೀಡಾ ಮಂಡಳಿ ವತಿಯಿಂದ ನಾಯನ್ಮಾರುಮೂಲೆ ಬಳಿಯ ಕಿರು ಕ್ರೀಡಾಂಗಣದಲ್ಲಿ ಟೆನ್ನಿಸ್ ಕೋರ್ಟ್ ನಿರ್ಮಿಸಲಾಗುತ್ತಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷರಾಗಿರುವ ಸಮಿತಿ ಈ ಸಂಬಂಧ ಚಟುವಟಿಕೆಗಳ ಮೇಲ್ನೋಟ ವಹಿಸುತ್ತಿದೆ. ಜಿಲ್ಲಾ ಟೆನ್ನಿಸ್ ಅಸೋಸಿಯೇಶನ್ ಈ ಕೋರ್ಟ್ ನ ಸಂರಕ್ಷಣೆಯ ಹೊಣೆ ಹೊಂದಿದೆ.
ಗೈಲ್ ಸಂಸ್ಥೆಯಿಂದ ಲಭಿಸಿರುವ ಸಾಮಾಜಿಕ ಹೊಣೆ ನಿಧಿಯಿಂದ ಈ ಕೋರ್ಟ್ ನಿರ್ಮಾಣ ನಡೆಯುತ್ತಿದೆ ಎಂದು ಕ್ರೀಡಾ ಮಂಡಳಿ ಅಧ್ಯಕ್ಷ ಪಿ.ಹಬೀಬ್ ರಹಮಾನ್ ತಿಳಿಸಿದರು. 15 ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳಿಗೆ ಇಲ್ಲಿ ಬೆಳಗ್ಗೆ ಮತ್ತು ಸಂಜೆ ತರಬೇತು ನೀಡಲಾಗುವುದು. ಬಡಮಕ್ಕಳಿಗೆ ವಿಶೇಷ ಪರಿಶೀಲನೆ ಒದಗಿಸಲಾಗುವುದು. ಸಾರ್ವಜನಿಕರಿಗೆ ಸದಸ್ಯತನ ರೂಪದಲ್ಲಿ ನಿಗದಿತ ಶುಲ್ಕ ಪಡೆಯಲಾಗುವುದು ಎಂದವರು ನುಡಿದರು.