ಮುಳ್ಳೇರಿಯ: ಗಾಳಿಮುಖ ಶಕ್ತಿನಗರ ಶ್ರೀ ಅಯ್ಯಪ್ಪಸ್ವಾಮಿ ಭಜನಾ ಮಂದಿರದ ಪ್ರಥಮ ಪ್ರತಿಷ್ಠಾ ವಾರ್ಷಿಕೋತ್ಸವ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿ ಮತ್ತು ಬ್ರಹ್ಮಶ್ರೀ ರವೀಶ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಶನಿವಾರ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಮಂದಿರದ ಗುರುಸ್ವಾಮಿ ಮತ್ತು ಶಿಷ್ಯವೃಂದದವರಿಂದ, ಶ್ರೀ ಪಂಚಲಿಂಗೇಶ್ವರ ಭಜನಾ ಸಂಘ ಈಶ್ವರಮಂಗಲ, ಶ್ರೀ ಕರಿಚಾಮುಂಡಿ ಭಜನಾ ಸಂಘ ಮಾಯಿಲಂಕೋಟೆ, ಶ್ರೀ ಅಯ್ಯಪ್ಪ ಭಜನಾ ಸಂಘ ಕುಂಟಾರು, ಶ್ರೀ ಮೂಕಾಂಬಿಕಾ ಭಜನಾ ಸಂಘ ಉಯಿತ್ತಡ್ಕ, ಶ್ರೀ ಶಾರದಾಂಬಾ ಭಜನಾ ಸಂಘ ಕೈತ್ತೋಡು ಇವರಿಂದ ಭಜನೆ, ಆರ್ಟ್ ಓಫ್ ಲಿವಿಂಗ್ ಮುಳ್ಳೇರಿಯ ಇವರಿಂದ ಸತ್ಸಂಗ, ಮುಖ್ಯಪ್ರಾಣ ಭಜನಾ ಸಂಘ ಆದೂರು ಗ್ರಾಮ ಇವರಿಂದ ಭಜನಾಮೃತ, ಗಣಪತಿ ಹೋಮ ನಡೆಯಿತು. ಕುಂಟಾರು ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾಸಂಘ ಕುಂಟಾರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು. ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರದಿಂದ ಸಮವಸ್ತ್ರ ಧರಿಸಿದ ಮಕ್ಕಳು ಮತ್ತು ಮಹಿಳೆಯರು ಆರತಿಯೊಂದಿಗೆ, ಚೆಂಡೆ ಮೇಳ, ಸುಡುಮದ್ದು ಪ್ರದರ್ಶನ, ಅಯ್ಯಪ್ಪ ವ್ರತಧಾರಿಗಳ ಪೇಟತುಳ್ಳಲ್‍ನೊಂದಿಗೆ ಉಲ್ಪೆ ಮೆರವಣಿಗೆಯು ನಡೆಯಿತು. ಇನ್ನೂರಕ್ಕೂ ಹೆಚ್ಚು ಅಯ್ಯಪ್ಪ ವ್ರತಧಾರಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿದ್ದರು. ಅಯ್ಯಪ್ಪ ವ್ರತಧಾರಿಗಳ ಶರಣಂ ಘೋಷ, ಮಹಾಪೂಜೆ, ಅನ್ನದಾನ ನಡೆಯಿತು.