ಕಾಸರಗೋಡು: ಇಂದು ಕಾಣುತ್ತಿರುವ ಸಾಧಾರಣ ಕಾಮಗಾರಿಗಳಿಗಿಂತ ಭಿನ್ನವಾಗಿ, ನೂತನ ಸಾಧ್ಯತೆಗಳ ಕದ ತೆರೆದು ಮಹಾತ್ಮಾ ಗಾಂಧಿನೌಕರಿ ಖಾತರಿ ಯೋಜನೆ ದಾಪುಗಾಲಿರಿಸಲಿದೆ.
ನದಿತೀರ, ತೊರೆ ಇತ್ಯಾದಿಗಳ ಶುದ್ಧೀಕರಣ, ಕಾಡು, ಪೆÇದೆ ಕಡಿದು ತೆರವುಗೋಲಿಸುವುದು ಇತ್ಯಾದಿಗಳಿಗೆ ಸೀಮಿತವಾಗಿ ಸಮಾಜದಲ್ಲಿ ಕಂಡುಬಂದಿರುವ ನೌಕರಿ ಖಾತರಿ ಯೋಜನೆ ತನ್ನ ಶ್ರಮದಾನವನ್ನು ಹೊಸ ದಿಶೆಗಳತ್ತ ಮನಮಾಡಿ ಸಾಗುತ್ತಿದೆ. ಇದರ ಅಂಗವಾಗಿ ಕಟ್ಟಡಗಳ ನಿರ್ಮಾಣ ಇತ್ಯಾದಿ ಕಾಮಗಾರಿಗಳನ್ನು ನಡೆಸುವ ನಿಟ್ಟಿನಲ್ಲಿ ಆದ್ಯತೆ ನೀಡಿ ಮುಂದುವರಿಯುತ್ತಿದೆ. ಕಾಮಗಾರಿ ನಡೆದಿರುವ ಬಗ್ಗೆ ಸಾಕ್ಷಿಯಾಗಿ ನಿರ್ಮಾಣಕ್ಕೆ ಬಳಸುವ ಸಾಮಾಗ್ರಿಗಳ ವೆಚ್ಚ ಹಿಂದಿನವರ್ಷಗಳಲ್ಲಿ ಶೇ 0.76, ಶೇ 0.97, ಶೇ 2.97, ಶೇ 4.8 ಹೀಗೆ ಇತ್ತು. ಈ ಆರ್ಥಿಕ ವರ್ಷದಲ್ಲಿ ಅದು ಶೇ 11.84 ಆಗಿ ಹೆಚ್ಚಳಗೊಂಡಿದೆ ಎಂದು ಬಡತನ ಲಘೂಕರಣ ವಿಭಾಗ ಜಿಲ್ಲಾ ಯೋಜನೆ ನಿರ್ದೇಶಕ ಕೆ.ಪ್ರದೀಪನ್ ತಿಳಿಸಿದರು. ಕಾಸರಗೋಡು ಜಿಲ್ಲಾ ಪಂಚಾಯತ್ ವತಿಯಿಂದ ಬದತನ ನಿವಾರಣೆ ವಿಭಾಗ ಜಿಲ್ಲೆಯ ನೌಕರಿ ಖಾತರಿ ಯೋಜನೆಯ ಚಟುವಟಿಕೆಗಳನ್ನು ಏಕೀಕರಿಸಿ ನಿಯಂತ್ರಿಸುವ ಹೊಣೆ ಹೊತ್ತಿದೆ. ಕೆರೆ, ರಸ್ತೆ, ಮೈದಾನ, ಬಾವಿ ರೀಚಾರ್ಜ್ ಇತ್ಯಾದಿ ಚಟುವಟಿಕೆಗಳ ಜೊತೆಗೆ ವ್ಯಕ್ತಿಗತವಾಗಿರುವ ವಸತಿ, ಶೌಚಾಲಯ, ಮೆಕೆಗಳ ಗೂಡು, ಗೊಬ್ಬರ ಸೌಲಭ್ಯ, ಹಟ್ಟಿ, ಕೋಳಿಗೂಡು ಇತ್ಯಾದಿಗಳ ನಿರ್ಮಾಣವನ್ನೂ ವಹಿಸುತ್ತಿದೆ. ಮಣ್ಣು,ನೀರು, ನೀರಾವರಿ ಸಂರಕ್ಷಣೆ ಇತ್ಯಾದಿಗಳ ಕಾಮಗಾರಿಗಳನ್ನು, ಮನೆ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಹಟ್ಟಿ, ಕೋಳಿಗೂಡು ಇತ್ಯಾದಿ ಕಾಮಗಾರಿಗಳನ್ನು ವಹಿಸಿಕೊಳ್ಳಲಿದೆ. ಸ್ವಯಂ ಸೇವಾ ಸಂಗಟನೆಗಳಿಗೆ ಅಗತ್ಯವಿರುವ ಶ್ರಮದಾನದ ಸಹಾಯ, ಗ್ರಾಮೀಣ ಮೂಲಭೂತ ಸೌಲಭ್ಯಗಳ ಕಾಮಗಾರಿ, ಕಟ್ಟಡ,ಆವರಣಗೋಡೆ ಇತ್ಯಾದಿಗಳ ನಿರ್ಮಾಣ ಚಟುವಟಿಕೆ ನಡೆಸಲಾಗುತ್ತಿದೆ.
7611 ಲಕ್ಷ ರೂ. ವೆಚ್ಚ:
ಜಿಲ್ಲೆಯಲ್ಲಿ ಈ ಆರ್ಥಿಕ ವರ್ಷ ನವೆಂಬರ್ ತಿಂಗಳ ವರೆಗೆ ಮಾತ್ರ ನೌಕರಿ ಖಾತರಿ ಯೋಜನೆಯಲ್ಲಿ ವೆಚ್ಚಮಾಡಿರುವುದು 7611.03 ಲಕ್ಷ ರೂ. ಕಾರ್ಮಿಕರಿಗೆ ವೇತನ ವಲ್ಲದೆ, ನಿರ್ಮಾಣ ಕಾಮಗಾರಿಗಳ ಸಾಮಾಗ್ರಿಗಳಿಗೂ ಮೊಬಲಗು ಮಂಜೂರು ಮಾಡಲಾಗಿದೆ. ಈ ನಿಟ್ಟಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಾಮಾಗ್ರಿಗಳಿಗೆ ವೆಚ್ಚ ನಡೆಸಿರುವ ಗ್ರಾಮಪಂಚಾಯತ್ ವರ್ಕಾಡಿಒಯಾಗಿದೆ. ಯೋಜನೆ ವೆಚದ ಶೇ 57.21 ಮೊಬಲಗು ಈ ನಿಟ್ಟಿನಲ್ಲಿ ವೆಚ್ಚ ಮಾಡಲಾಗಿದೆ. ಬದಿಯಡ್ಕದಲ್ಲಿ ಶೇ 40.57, ಪೈವಳಿಕೆಯಲ್ಲಿ ಶೇ 33.42, ಎಣ್ಮಕಜೆಯಲ್ಲಿ 26.84, ಕಾರಡ್ಕದಲ್ಲಿ ಶೇ 25.11 ಮೊಬಲಗು ವೆಚ್ಚಮಾಡಲಾಗಿದೆ.
10 ಅಂಗನವಾಡಿಗಳ ನಿರ್ಮಾಣ:
ಜಿಲ್ಲೆಯಲ್ಲಿ 10 ಅಂನವಾಡಿ ಕಟ್ಟಡಗಳು ನೌಕರಿ ಖಾತರಿ ಯೋಜನೆಯ ಮೂಲಕ ನಿರ್ಮಾಣಗೊಂಡಿವೆ. ಪೈವಳಿಕೆ, ಕೋಡೋಂ-ಬೇಳೂರು, ಪಂಚಾಯತ್ಗಳಲ್ಲಿ ತಲಾ ಒಂದು ಅಂಗನವಾಡಿ ಕಟ್ಟಡಗಳು ಈಗಾಗಲೇ ನಿರ್ಮಾಣಗೊಂಡಿವೆ. ಉಳಿದಂತೆ 7 ಕಡೆ ನಿರ್ಮಾಣ ಚಟುವಟಿಕೆ ಮುಂದುವರಿಯುತ್ತಿದೆ. ಒಂದು ಚಟುವಟಿಕೆಯ ರೋಟೆಂಡರ್ ನಡೆಸಲಾಗುತ್ತಿದೆ. ಜೊತೆಗೆ ಅನೇಕ ಕಾಂಕ್ರಿಟೀಕೃತ ಡ್ರೈನೇಜ್, ಜಲಸಂರಕ್ಷಣೆ ಕಾಮಗಾರಿಗಳೂ ನಡೆಯುತ್ತಿವೆ.
4.46 ಲಕ್ಷ ಸಸಿಗಳು:
ಹರಿತ ಕೇರಳಂ ಮಿಷನ್ ಯೋಜನೆಯ ಅಂಗವಾಗಿ 19 ಲಕ್ಷ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಇದರ ಅಂಗವಾಗಿ 4.46 ಲಕ್ಷ ಸಸಿಗಳನ್ನು ನೌಕರಿಖಾತರಿ ನರ್ಸರಿಗಳಲ್ಲಿ ಬೆಳೆಯಲಾಗುತ್ತಿದೆ. ಈಗಾಗಲೇ 3.06 ಲಕ್ಷ ಸಸಿಗಳನ್ನು ನೆಡಲಾಗಿದೆ. ಇದಲ್ಲದೆ ಜಿಲ್ಲೆಯನ್ನು ಬಿದಿರಿನ ರಾಜಧಾನಿಯಾಗಿಸುವ ಜಿಲ್ಲಾಡಳಿತೆಯ ಯೋಜನೆಗಾಗಿ ನೌಕರಿ ಖಾತರಿ ವತಿಯಿಂದ 3 ಲಕ್ಷ ಬಿದಿರು ಸಸಿಗಳನ್ನು ಕಾಸರಗೋಡು ಮತ್ತು ಮಂಜೇಶ್ವರ ಬ್ಲೋಕ್ ಗಳಲ್ಲಿ ನೆಟ್ಟು ಬೆಲೆಸಲಾಗಿದೆ. ಯೋಜನೆ ಅಂಗವಾಗಿ ಬಿದಿರು ಸಸಿಗಳ ಉತ್ಪಾದನೆಯಲ್ಲೂ ನೌಕರಿ ಖಾತರಿ ಯೋಜನೆಯ ಸಹಕಾರ ನೀಡಲಾಗಿತ್ತು.
ನೌಕರಿ ಖಾತರಿ ಯೋಜನೆ ಮೂಲಕ ಜಲಸಂರಕ್ಷಣೆ ಚಟುವಟಿಕೆಗಳು ಅತ್ಯುತ್ತಮ ರೀತಿ ನಡೆಯುತ್ತಿವೆ. ಇದರ ಅಂಗವಾಗಿ ತೋಡು, ನದಿ ಇತ್ಯಾದಿಗಳ ಭಿತ್ತಿ ಸಂರಕ್ಷಣೆಗೆ ಭೂಹಾಸು ಬಳಸಿ ಸಂರಕ್ಷಣೆ ನಡೆಸುವ, ತ್ಯಾಜ್ಯ ನಿವಾರಿಸಿ ನೀರನ್ನು ಶುಚೀಕರಿಸುವ, ಇತ್ಯಾದಿ ಕಾಮಗಾರಿಗಳು ಪರಿಣಾಮಕಾರಿಯಾಗಿವೆ. ನೆರೆಹಾವಳಿಯಿಂದ ನಾಶ-ನಷ್ಟ ಸಂಭವಿಸಿದ ಪ್ರದೇಶಗಳಲ್ಲಿ ದುರಸ್ತಿ ಕಾಮಗಾರಿ ನಡೆಸುವಲ್ಲೂ ಈ ಯೋಜನೆಯ ಪ್ರಯೋಜನ ಲಭಿಸಿದೆ.