ಬದಿಯಡ್ಕ: ಕಾಸರಗೋಡು ಜಿಲ್ಲಾ ಮೊಗೇರ ಸಂಘದ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 63ನೇ ಪರಿನಿರ್ವಾಣ ಕಾರ್ಯಕ್ರಮವು ಬದಿಯಡ್ಕದಲ್ಲಿರುವ ಜಿಲ್ಲಾ ಸಮಿತಿ ಕಚೇರಿಯಲ್ಲಿ ಶುಕ್ರವಾರ ಜರಗಿತು.
ಬದಿಯಡ್ಕ ಉಪನೊಂದಾವಣಾ ಕಚೇರಿಯ ಸೀನಿಯರ್ ಕ್ಲರ್ಕ್ ಬಿಂದು ಕಣ್ಣೂರು ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿ ದೇಶದ ಮಹಾನ್ ನಾಯಕರಾದ ಅಂಬೇಡ್ಕರ್ ಅವರ ಆದರ್ಶ ವ್ಯಕ್ತಿತ್ವವು ನಮಗೆ ಮಾರ್ಗದರ್ಶಿಯಾಗಬೇಕು. ಸಮಾಜದಲ್ಲಿ ವಿದ್ಯಾಭ್ಯಾಸ ಕ್ರಾಂತಿಯನ್ನುಂಟುಮಾಡಿದ ಧೀಮಂತ ವ್ಯಕ್ತಿ ಅವರಾಗಿದ್ದಾರೆ ಎಂದರು.
ಜಿಲ್ಲಾ ಅಧ್ಯಕ್ಷ ಬಾಬು ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅಧ್ಯಕ್ಷ ಅಂಗಾರ ಅಜಕ್ಕೋಡು, ರವಿಕಾಂತ ಕೇಸರಿ ಕಡಾರು, ಜಿಲ್ಲಾ ಕೋಶಾಕಾರಿ ಗೋಪಾಲ ದರ್ಭೆತ್ತಡ್ಕ, ಸುಂದರಿ ಗೋಪಾಲ ಶುಭಕೋರಿದರು. ರಾಜ್ಯ ಕಾರ್ಯದರ್ಶಿ ಹರಿರಾಮ ಕುಳೂರು ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ ವಂದಿಸಿದರು.