HEALTH TIPS

ಇನ್ನು ಅಪರಾತ್ರಿಯಲ್ಲಿ ಮಹಿಳೆಯರಿಗೆ ಅಂಜಿಕೆ ಬೇಡ: ಆರಂಭಗೊಂಡಿತು ನಿರ್ಭಯ ರಾತ್ರಿ ಸಂಚಾರ ಆಂದೋಲನ


    ಕಾಸರಗೋಡು: ಯಾವುದೇ ಅಪರಾತ್ರಿಯಲ್ಲೂ ಮಹಿಳೆಯರು ಅಂಜಿಕೆಯಿಲ್ಲದೇ ನಡೆದಾಡುವ ದಿನಗಳು ಇನ್ನು ದೂರವಿಲ್ಲ.
        "ಸಾರ್ವಜನಿಕ ಪ್ರದೇಶಗಳಲ್ಲಿ ನಿರ್ಭಯವಾಗಿ ನಡೆದಾಡಲು ನನಗೂ ಹಕ್ಕಿದೆ" ಎಂಬ ಸಂದೇಶದೊಂದಿಗೆ ಮಹಿಳೆ ರಾತ್ರಿ ಕಾಲ ಸಂಚಾರಕ್ಕೆ ತೊಡಗಿಕೊಂಡಿರುವ ಈಗಾಗಲೇ ಆರಂಭಗೊಂಡಿದೆ.
      ಭಾನುವಾರ(ಡಿ.29) ರಂದು ರಾತ್ರಿ 11 ಗಂಟೆಯಿಂದ ಒಂದು ಗಂಟೆ ವರೆಗೆ ಮಹಿಳೆಯರು ಈ ರೀತಿ ಧೈರ್ಯವಾಗಿ ರಸ್ತೆಯಲ್ಲಿ ನಡೆದಾಡಿದ್ದಾರೆ. ರಾಜ್ಯಾದ್ಯಂತ ನಡೆದ ಈ ಮಹತ್ವದ ಅಭಿಯಾನದ ಅಂಗವಾಗಿ ಗಡಿನಾಡು ಜಿಲ್ಲೆಯ ಮೂರು ಪ್ರಧಾನ ಕೇಂದ್ರಗಳಲ್ಲೂ ರಾತ್ರಿ ಕಾಲದ ಈ ಬಿರ್ಭಯ ನಡಿಗೆ ನಡೆಸಲಾಗಿದೆ.
      ಇತರ ಜಿಲ್ಲೆಗಳಲ್ಲಿ ಈ ಸಂಬಂಧ ಮುಂಗಡ ಪ್ರಚಾರ ಸಹಿತವಾಗಿ ಈ ಆಂದೋಲನ ನಡೆದಿದ್ದರೆ, ಕಾಸರಗೋಡು ಜಿಲ್ಲೆಯಲ್ಲಿ ಮಾತ್ರ ಸದ್ದಿಲ್ಲದೇ ನಡೆಸಲಾಗಿತ್ತು. ರಾತ್ರಿ ರಸ್ತೆಯಲ್ಲಿ ನಡೆದಾಡುವ ಹೆಣ್ಣನ್ನು ಸಮಾಜ ಕಂಡುಕೊಳ್ಳುವ ಬಗೆಯನ್ನು ಅರಿಯುವ ನಿಟ್ಟಿನಲ್ಲಿ ಈ ಗೌಪ್ಯವನ್ನು ಕಾಪಿಡಲಾಗಿತ್ತು. ಮೂರು ಪ್ರಧಾನ ಕೇಂದ್ರಗಳ 9 ರಸ್ತೆಗಳಲ್ಲಿ 9 ಹೆಣ್ಣುಮಕ್ಕಳು ಏಕಾಂಗಿಯಾಗಿ ರಸ್ತೆಯುದ್ದಕ್ಕೂ ನಡೆದಾಡಿದರು. ಕಾಸರಗೋಡು ನಗರಸಭೆ-ಪ್ರೆಸ್ ಕ್ಲಬ್ ಜಂಕ್ಷನ್-ವಿದ್ಯಾನಗರ, ಕಾಸರಗೋಡು ನಗರಸಭೆ-ಶ್ರೀ ಮಲ್ಲಿಕಾರ್ಜುನ ದೇವಾಲಯ-ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ-ವಿದ್ಯಾನಗರ, ಕಾಸರಗೋಡು ನಗರಸಭೆ-ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ-ಬ್ಲೋಕ್ ಆಫೀಸ್-ಹೈವೇ-ವಿದ್ಯಾನಗರ ಎಂಬ ದಾರಿಗಳಲ್ಲಿ ರಾತ್ರಿ ಸಂಚಾರ ನಡೆದಿದೆ.
      ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಸಹಾಯಕ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಅವರು ನೇತೃತ್ವ ವಹಿಸಿದ್ದರು. ನಡೆದಾಡಿದ ಹೆಣ್ಣುಮಕ್ಕಳು ಅಣಂಗೂರಿನಲ್ಲಿ ಜತೆಸೇರಿ ತಮ್ಮ ಅನುಭವ ಹಂಚಿಕೊಂಡರು. ಈ ಒಕ್ಕೂಟದಲ್ಲಿ ಕಾಸರಗೋಡು ನಗರಸಭೆ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ಜಿಲ್ಲಾ ಮಹಿಳಾ-ಶಿಶು ಸಂರಕ್ಷಣೆ ಅಧಿಕಾರಿ ಡೀನಾ ಭರತನ್, ವಿವಿಧ ಇಲಾಖೆಗಳ ಸಿಬ್ಬಂದಿ, ನಗರಸಭೆ ಪ್ರತಿನಿಧಿಗಳು, ಕಾಲೇಜು ವಿದ್ಯಾರ್ಥಿಗಳು ಮೊದಲಾದವರು ಇದ್ದರು.
     ನಗರದಲ್ಲಿ ಏಕಾಂಗಿಯಾಗಿ ನಡೆಯುತ್ತಿದ್ದ ಯುವತಿಗೆ ಉಪಟಳ ನೀಡಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಪೆÇಲೀಸರು ಬಂಧಿಸಿದ್ದಾರೆ. ಇದೇ ಆರೋಪದಲ್ಲಿ ವಾಹನವೊಂದರಲ್ಲಿ ಬಂದ ಮಂದಿಯನ್ನು ಪೆÇಲೀಸರು ಹುಡುಕಾಡುತ್ತಿದ್ದಾರೆ.
        ಕಾಞಂಗಾಡಿನಲ್ಲಿ ನಡೆದ ನಿರ್ಭಯ ರಾತ್ರಿ ಸಂಚಾರಕ್ಕೆ ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಕಾಞಂಗಾಡು ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ನೇತೃತ್ವ ವಹಿಸಿದ್ದರು. ಸಂಚಾರ ನಡೆಸಿದ ನಂತರ ಹೆಣ್ಣುಮಕ್ಕಳು ಅಲಾಮಿಪಳ್ಳಿ ಬಸ್ ನಿಲ್ದಾಣ ಬಳಿ ಒಟ್ಟು ಸೇರಿ, ಅನುಭವ ಹಂಚಿಕೊಂಡರು. ಈ ಒಕ್ಕೂಟದಲ್ಲಿ ಕಾಞಂಗಾಡ್ ನಗರಸಭೆಯ ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಗಂಗಾ ರಾಧಾಕೃಷ್ಣನ್, ಮಹಮೂದ್ ಮುರಿಯಾನಾವಿ, ಉಪಜಿಲ್ಲಾಧಿಕಾರಿ ಅವರ ಪತ್ನಿ ಬೆವಿನ್ ಜಿಹಾನ್, ಸಿ.ಡಬ್ಲ್ಯೂ.ಸಿ. ಅಧ್ಯಕ್ಷೆ ಪಿ.ಪಿ.ಶ್ಯಾಮಲಾದೇವಿ, ಜಿಲ್ಲಾ ಮಹಿಳಾ ಸಂರಕ್ಷಣೆ ಅಧಿಕಾರಿ ಎಂ.ವಿ.ಸುನಿತಾ, ಐ.ಡಿ.ಡಿ.ಎಸ್. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್, ನಗರಸಭೆ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ಇದ್ದರು.
       ನೀಲೇಶ್ವರದಲ್ಲಿ ನಗರಸಭೆ ಉಪಾಧ್ಯಕ್ಷೆ ವಿ.ಗೌರಿ ನಿರ್ಭಯ ಸಂಚಾರಕ್ಕೆ ನೇತೃತ್ವ ವಹಿಸಿದ್ದರು. ಸಂಚಾರ ನಂತರ ಮಹಿಳೆಯರು ಕಾನ್ವೆಂಟ್ ಜಂಕ್ಷನ್ ನಲ್ಲಿ ಜತೆಸೇರಿದರು. ನಗರಸಭೆ ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಪಿ.ರಾಧಾ, ಪಿ.ಎಂ.ಸಂಧ್ಯಾ, ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಸಿ.ಎ.ಬಿಂದು, ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳಾದ ರೀನಾ ಕುಮಾರಿ, ಲಕ್ಷ್ಮಿ, ಕಾಲೇಜು ವಿದ್ಯಾರ್ಥಿಗಳು, ಐ.ಸಿ.ಡಿ.ಎಸ್. ಮೇಲ್ವಿಚಾರಕರು, ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries