ಪಾಲಕ್ಕಾಡ್: ಪೌರತ್ವ ಕಾಯ್ದೆಯನ್ನು ಪ್ರತಿಭಟಿಸಿ ನಾಳೆ(ಮಂಗಳವಾರ) ರಾಜ್ಯ ವ್ಯಾಪಕವಾಗಿ ಹರತಾಳ ನಡೆಸಲಾಗುವುದೆಂದು ಸಂಯುಕ್ತ ಮುಷ್ಕರ ಸಮಿತಿ ಸೋಮವಾರ ಪಾಲಕ್ಕಾಡಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದೆ. ಶಬರಿಮಲೆ ಉತ್ಸವದ ಹಿನ್ನಲೆಯಲ್ಲಿ ರಾನ್ನಿ ತಾಲೂಕಿನಲ್ಲಿ ಹರತಾಳ ಬಾಧಕವಲ್ಲ ಎಂದು ಸಂಬಂಧಪಟ್ಟವರು ತಿಳಿಸಿರುವರು.
ಹರತಾಳ ಶಾಂತಿಯುತವಾಗಿರುವುದು. ಹರತಾಳಕ್ಕೆ ಕರೆನೀಡಿರುವ ಸಂಘಟನೆಗಳಿಂದ ಯಾವುದೇ ಉಗ್ರ ಕ್ರಮಗಳು ಇರುವುದಿಲ್ಲ ಎಂದು ಸಂಘಟಕರು ತಿಳಿಸಿರುವರು. ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ, ವಾಹನಗಳನ್ನು ರಸ್ತೆಗಿಳಿಸದೆ ಸಾರ್ವಜನಿಕರು ಸಹಕರಿಸಬೇಕು ಎಂದು ಮುಷ್ಕರ ಸಮಿತಿ ತಿಳಿಸಿದೆ.
ಶಾಂತಿಯುತ ಹರತಾಳವನ್ನು ದಿಕ್ಕುತಪ್ಪಿಸದಂತೆ ಮುಂಜಾಗ್ರತಾ ಕ್ರಮವಾಗಿ ವೆಲ್ಪೇರ್ ಪಕ್ಷದ ಮೂವಾಟ್ಟಿಪುಳ ಮಂಡಲ ನೇತಾರರಾದ ನಸೀರ್ ಆಲಿಯಾರ್, ಯೂನಸ್, ಅನ್ವರ್, ನಜೀಬ್ ಅವರುಗಳನ್ನು ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ನಾಳೆ ಅಪರಾಹ್ನ ಬಿಡುಗಡೆಗೊಳಿಸಲಾಗುವುದೆಂದು ಪೋಲೀಸ್ ಮೂಲಗಳು ತಿಳಿಸಿವೆ.
ಪರೀಕ್ಷೆಗಳ ಬದಲಾವಣೆ ಇಲ್ಲ:
ನಾಳೆ ನಡೆಯಲಿರುವ ಯಾವುದೇ ಪರೀಕ್ಷೆಗಳಲ್ಲಿ ಯಾವುದೇ ಬದಕಲಾವಣೆಗಳಿಲ್ಲ ಎಂದು ಅಧಿಕೃತರು ತಿಳಿಸಿದ್ದಾರೆ. ಕೆ ಸೆಟ್ ಪರೀಕ್ಷೆಗಳ ಸಹಿತ ವಿವಿ ಮಟ್ಟದ ಎಲ್ಲಾ ಪರೀಕ್ಷೆಗಳು ನಿಗದಿಯಾದಂತೆ ನಡೆಯಲಿದೆ.