ಮಂಜೇಶ್ವರ: ಹದಿನೆಂಟು ಪೇಟೆಗಳ ದೇವಾಲಯವೆಂಬ ಖ್ಯಾತಿಯ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಾಲಯದಲ್ಲಿ ನ.27 ರಿಂದ ವಾರ್ಷಿಕ ಷಷ್ಠಿ ಮಹೋತ್ಸವ ಆರಂಭಗೊಂಡಿದ್ದು, ಇಂದು(ಸೋಮವಾರ)ಐತಿಹಾಸಿಕ ರಥೋತ್ಸವ ನಡೆಯಲಿದೆ.
ಭಾನುವಾರ ಬೆಳಿಗ್ಗೆ ಸ್ವರ್ಣಲಾಲ್ಕಿ ಹಗಲು ಉತ್ಸವ, ಮಧ್ಯಾಹ್ನ 12ಕ್ಕೆ ಪ್ರಾರ್ಥನೆ, ಬಳಿಕ ಅಪರಾಹ್ನ 3.30ರ ವರೆಗೆ ಅಭಿಷೇಕ, ಸಂಜೆ 5ಕ್ಕೆ ಮಹಾಪೂಜೆ, 5.30 ರಿಂದ ದೇವದರ್ಶನ, ಪ್ರಾರ್ಥನೆ, 6ಕ್ಕೆ ಯಜ್ಞ,7.30 ರಿಂದ ಯಜ್ಞಾರತಿ, ಬಲಿ, ರಾತ್ರಿ 8ಕ್ಕೆ ಮಹಾಪೂಜೆ, ಸಮಾರಾಧನೆ, ಮಧ್ಯರಾತ್ರಿ 12.30 ರಿಂದ ಮುಂಜಾನೆ 5ರ ವರೆಗೆ ಬೆಳ್ಳಿ ಲಾಲ್ಕಿಯಲ್ಲಿ ಮೃಗಬೇಟೆ, ಅಡ್ಡಪಲ್ಲಕಿ ಉತ್ಸವ, ಸಣ್ಣ ರಥ ಉತ್ಸವ, ವಸಂತಪೂಜೆ ಮಂಗಳಾರತಿಗಳು ನೆರವೇರಿದವು.
ಇಂದು(ಸೋಮವಾರ) ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ರ ವರೆಗೆ ಮಹಾಧರ್ಮ, 12.30 ರಿಂದ ಮಹಾಪೂಜೆ, 1ಕ್ಕೆ ಯಜ್ಞ, ಅಪರಾಹ್ನ 3.30ಕ್ಕೆ ಪೂರ್ಣಾಹುತಿ, 4ಕ್ಕೆ ಯಜ್ಞಾರತಿ, ಸ್ವರ್ಣಲಾಲ್ಕಿಯಲ್ಲಿ ಬಲಿ ಉತ್ಸವ ಮತ್ತು ರಥೋತ್ಸವಕ್ಕೆ ಹೊರಡುವುದು, ಸಂಜೆ 5ಕ್ಕೆ ಮಹಾ ರಥೋತ್ಸವ, ರಾತ್ರಿ 8.30 ಕ್ಕೆ ರಥಾವರೋಹಣ, 9.30ಕ್ಕೆ ಮಂಗಳಾರತಿ, ಸಮಾರಾಧನೆ ನಡೆಯಲಿದೆ.
ನಾಳೆ(ಮಂಗಳವಾರ) ಮಧ್ಯಾಹ್ನ 1.30ಕ್ಕೆ ಅವಭೃತ, 2.30ರಿಂದ ಸಂಜೆ 4.30ರ ವರೆಗೆ ಮರದ ಲಾಲ್ಕಿ, ಸಣ್ಣ ರಥೋತ್ಸವಗಳು, 5ಕ್ಕೆ ಶೇಷ ತೀರ್ಥ ಸ್ನಾನ, 6ಕ್ಕೆ ಧ್ವಜಾವರೋಹಣ, 7ಕ್ಕೆ ಗಡಿಪ್ರಸಾದ ವಿತರಣೆ, 9.30ಕ್ಕೆ ಮಹಾಪೂಜೆ, ಬ್ರಾಹ್ಮಣ ಸಂತರ್ಪಣೆಯೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.
ಚಿತ್ರ ಮಾಹಿತಿ: ಭಾನುವಾರ ನಡೆದ ಮಂಜೇಶ್ವರ ಅನಂತೇಶ್ವರ ದೇವಾಲಯದ ಷಷ್ಠಿ ಪ್ರಯುಕ್ತದ ಸ್ವರ್ಣಲಾಲ್ಕಿ ಹಗಲು ಉತ್ಸವ.