HEALTH TIPS

ಮಾನವನನ್ನು ಎಚ್ಚರಿಸುವಲ್ಲಿ ಜೈವ ವೈವಿಧ್ಯ ಶಿಬಿರಗಳ ಪಾತ್ರ ಹಿರಿದು- ಬೆದ್ರಂಪಳ್ಳ ನಿಸರ್ಗದಲ್ಲಿ ನಡೆದ ಅಂತರ್ ಕಾಲೇಜು ಜೈವವೈವಿದ್ಯತೆ ಶಿಬಿರದಲ್ಲಿ ನಡೆದ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಸನ್ನಿಧಿ. ಟಿ. ರೈ


     ಪೆರ್ಲ: ಪ್ರಕೃತಿಯಲ್ಲಿ ಇತ್ತೀಚೆಗೆ ಅಸ್ಥಿತ್ವಕ್ಕೆ ಬಂದ ಮಾನವನಿಲ್ಲದಿದ್ದರೂ ಭೂಮಿಯಿರುತ್ತದೆ ಎಂಬ ಮುಂದಾಲೋಚನೆಯಿಲ್ಲದ ಮಾನವ ತನ್ನ ಅಸ್ಥಿತ್ವವನ್ನು ತಾನಾಗಿಯೇ ಇಲ್ಲದಾಗಿಸುವ ಪ್ರಯತ್ನದಲ್ಲಿದ್ದಾನೆ. ಇಂದಿಗೂ ಎಚ್ಚರಗೊಳ್ಳದ, ಜೈವ ವೈವಿಧ್ಯತೆಯ ಪ್ರಾಮುಖ್ಯತೆಯನ್ನು ಅರಿಯದ, ದಿನನಿತ್ಯ ಜೈವ ವೈವಿಧ್ಯ ನಾಶದಲ್ಲಿ ತೊಡಗುವ, ಮಾನವನನ್ನು ಎಚ್ಚರಿಸುವಲ್ಲಿ ಇಂತಹ ಜೈವ ವೈವಿಧ್ಯ ಶಿಬಿರಗಳು ಪ್ರಮುಖ ಪಾತ್ರ ಹಿರಿದು ಎಂದು ಬಹುಮಖ ಪ್ರತಿಭೆ ಸನ್ನಿಧಿ ಟಿ ರೈ. ಪೆರ್ಲ ಹೇಳಿದರು.
      ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ನೇತೃತ್ವದಲ್ಲಿ ನಿಸರ್ಗ ಬೆದ್ರಂಪಳ್ಳದ ಪ್ರಯೋಜಕತ್ವದಲ್ಲಿ ಮಂಜೇಶ್ವರ, ಕಾಸರಗೋಡು ಸರಕಾರಿ ಕಾಲೇಜು ಹಾಗೂ ಪೆರ್ಲ ನಾಲಂದ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ಭೂಮಿತ್ರಸೇನಾ ಕ್ಲಬ್ ಗಳ ಸಹಕಾರದೊಂದಿಗೆ ಬೆದ್ರಂಪಳ್ಳ ನಿಸರ್ಗದಲ್ಲಿ ನಡೆದ ಜೈವ ವೈವಿಧ್ಯ ಶಿಬಿರದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
     ವೈವಿಧ್ಯತೆ ಇಲ್ಲದೇ ಹೋದಾಗ ನಾಗರಿಕತೆ ನಶಿಸುವಂತೆ ಜೈವ ವೈವಿಧ್ಯತೆಯಿಲ್ಲದೆ ಹೋದರೆ ಪರಿಸರ ನಾಶವಾಗುತ್ತದೆ. ಪರಿಸರದ ಸಂರಕ್ಷಣೆಯ ಬಗ್ಗೆ ಗಾಢವಾಗಿ ಯೋಚಿಸಬೇಕಾದದ್ದು ಇಂದಿನ ಸಮಾಜದ ಬಲು ದೊಡ್ಡ ಆವಶ್ಯಕತೆ. ಮಾನವನ ಅನಿಯಂತ್ರಿತ ಕಾರ್ಯಗಳಿಂದಾಗಿ ದಿನೇ ದಿನೇ ನಶಿಸಿಹೋಗುತ್ತಿರುವ ಜೈವ ವೈವಿಧ್ಯತೆಯನ್ನು ಅರ್ಥಮಾಡಿಕೊಳ್ಳಲು ಗಮನಿಸುವಿಕೆಯ ಗುಣ ವಿಧ್ಯಾರ್ಥಿಗಳಲ್ಲಿ ಅತ್ಯಗತ್ಯ ಎಂದರು.
     ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜೆಸಿಐ ಯ ಅಂತಾರಾಷ್ಟ್ರೀಯ ತರಬೇತುದಾರ, ಮೂನ್ನಡ್ ಪೀಪಲ್ಸ್ ಕಾಲೇಜಿನ ಉಪನ್ಯಾಸಕ ಪುಷ್ಪಾಕರ ಬಂಡಿಚ್ಚಾಲ್ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಲ್ಲಿ ಅವರ ವ್ಯಕ್ತಿತ್ವ ವಿಕಸನವಾಗುತ್ತದೆ. ಮಾನವನ ವ್ಯಕ್ತಿತ್ವ ಸುದೃಢ ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯವಾಗುತ್ತದೆ ಎಂದರು.
    ಎಣ್ಮಕಜೆ ಪಂಚಾಯತಿ ಸ್ಥಾಯಿ ಸಮಿತಿ ಸದಸ್ಯೆ ಆಯಿಷಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರು ಪ್ರಕೃತಿಯೊಂದಿಗೆ, ಮಣ್ಣಿನೊಂದಿಗೆ ಬೆರೆತು ಬೆಳೆದ ಕಾರಣ ಈಗಿನ ಜನಾಂಗ ಎದುರಿಸುತ್ತಿರುವಂತಹ ಪರಿಸರ ಮಾಲಿನ್ಯ, ಆರೋಗ್ಯ ಸಮಸ್ಯೆ, ಒಕ್ಸಿಜನ್ ನ ಕೊರತೆ, ಪದೇ ಪದೇ ಪ್ರಕೃತಿ ವಿಕೋಪ ಮುಂತಾದ ಸಮಸ್ಯೆಗಳು ತಲೆದೋರಲಿಲ್ಲ. ಮನುಷ್ಯ ಪ್ರಕೃತಿಯನ್ನು ಶೋಷಣೆಯ ವಸ್ತುಗಳನ್ನಾಗಿ ಬಲಸಿದುದರ ಫಲವಾಗಿ ಸಮಸ್ಯೆಗಳನ್ನು ಎದುರಿಸಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದರು.
     ಎಣ್ಮಕಜೆ ಗ್ರಾಮ ಪಂಚಾಯತಿ ಸದಸ್ಯ ಉದಯ ಚೆಟ್ಟಿಯಾರ್, ಎನ್ನೆಸ್ಸೆಸ್ ಉತ್ತಮ ಕಾರ್ಯದರ್ಶಿ ಪುರಸ್ಕøತ ಅಶ್ರಫ್ ಮತ್ರ್ಯ, ನಿವೃತ್ತ ಉಪ ನೋಂದನಾಧಿಕಾರಿ ಮೊಹಮ್ಮದ್ ಅಲಿ ಪೆರ್ಲ, ಮಾಜಿ ಎನ್ನೆಸ್ಸೆಸ್ ಕಾರ್ಯದರ್ಶಿ ಸಯ್ಯದ್ ತಾಹ, ಉದ್ಯಮಿ ತಾರನಾಥ ರೈ. ಪೆರ್ಲ, ಸಾಹಿತಿ ರಾಜಶ್ರೀ ಟಿ. ರೈ ಪೆರ್ಲ ಮತ್ತಿತರರು ಉಪಸ್ಥಿತರಿದ್ದರು. ಶಿಬಿರದ ಸಂಯೋಜಕ, ಮಂಜೇಶ್ವರ ಕಾಲೇಜಿನ ಉಪನ್ಯಾಸಕ ಮೊಹಮ್ಮದ್ ಅಲಿ ಸ್ವಾಗತಿಸಿ, ಅಶ್ವತಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries