HEALTH TIPS

ರಾಷ್ಟ್ರೀಯ ತುಳು ವಿಚಾರ ಸಂಕಿರಣ-ಅಂತಿಮ ತಯಾರಿಯ ಪೂರ್ವಭಾವೀ ಅವಲೋಕನ


         ಕಾಸರಗೋಡು: ಕೇರಳ ತುಳು ಅಕಾಡೆಮಿ ನೇತೃತ್ವದಲ್ಲಿ ರಾಷ್ಟ್ರೀಯ ಮಟ್ಟದ ತುಳು ವಿಚಾರಸಂಕಿರಣ ಡಿ.17, 18ರಂದು ಕಾಸರಗೋಡು ಲಲಿತ ಕಲಾಸದನದಲ್ಲಿ ಜರಗಲಿದೆ. ಕಾರ್ಯಕ್ರಮದ ಅಂಗವಾಗಿ ಶನಿವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಪೂರ್ವಭಾವೀ ಅಂತಿಮ ರೂಪುರೇಖೆಗಳ ಸಭೆ ನಡೆಯಿತು.ಸಭೆಯಲ್ಲಿ ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಕೆ. ಕುಮಾರನ್ ಮಾಸ್ತರ್ ಅವರು ವಿಚಾರ ಸಂಕಿರಣದ ಕಾರ್ಯಸೂಚಿಯ ಬಗ್ಗೆ ಮಾಹಿತಿ ನೀಡಿದರು.
    ಡಿ.17 ರಂದು ಬೆಳಿಗ್ಗೆ 10.15 ಕ್ಕೆ ಕಾಸರಗೋಡು ಶಾಸಕ ಎನ್ ಎ ನೆಲ್ಲಿಕುನ್ನು ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ವಿಚಾರ ಸಂಕಿರಣವನ್ನು ರಾಜ್ಯ ವಿದ್ಯುತ್ ಖಾತೆಯ ಸಚಿವ ಎಂ.ಎಂ.ಮಣಿ ಉದ್ಘಾಟಿಸುವರು. ಸಂಸದ ರಾಜಮೋಹನ ಉಣ್ಣಿತ್ತಾನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದರ್ಭ ಅಕಾಡೆಮಿಯ ವಿಶೇಷ ಸಂಚಿಕೆ ತೆಂಬರೆಯನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಬಿಡುಗಡೆಗೊಳಿಸುವರು. ಹಾವೇರಿಯ ಜನಪದ ವಿವಿಯ ನಿಕಟಪೂರ್ವ ಉಪಕುಲಪತಿ ಡಾ.ಚಿನ್ನಪ್ಪ ಗೌಡ ದಿಕ್ಸೂಚಿ ಭಾಷಣ ಮಾಡುವರು. ವಿವಿಧ ವಲಯಗಳ ಗಣ್ಯರು ಉಪಸ್ಥಿತರಿರುವರು. ಬಳಿಕ ನಡೆಯಲಿರುವ ಕಾಸರಗೋಡಿನ ತುಳು ಭಾಷೆಯ ಸೊಗಡು ಎಂಬ ವಿಷಯದ ಬಗ್ಗೆ ಸಮಗ್ರ ಶಿಕ್ಷಾ ಯೋಜನೆಯ ಜಿಲ್ಲಾ ನಿರೂಪಣಾಧಿಕಾರಿ ನಾರಾಯಣ ದೇಲಂಪಾಡಿ ಹಾಗೂ ಕಾಸರಗೋಡಿನ ತುಳು ಸಾಹಿತ್ಯ ಎಂಬ ವಿಷಯದಲ್ಲಿ ತುಳು ಸಾಹಿತಿ ಡಾ.ಕಿಶೋರ್ ಕುಮಾರ್ ರೈ ಶೇಣಿ ವಿಚಾರ ಮಂಡನೆ ನಡೆಸುವರು. ಬಳಿಕ ರಸಪ್ರಶ್ನೆ ಸ್ಪರ್ಧೆ,ಆಟಿ ಕಳಂಜ, ಪ್ರಬಂಧ ಸ್ಪರ್ಧೆ ಮೊದಲಾದವುಗಳು ನಡೆಯಲಿದೆ. ಕಂಗಿಲು ನಲಿಕೆ, ತುಳು ಯಕ್ಷಗಾನ ಭಾಗವತಿಕೆ ಮೊದಲಾದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
    ಡಿ.18 ರಂದು ಬೆಳಿಗ್ಗೆ 9 ರಿಂದ ತುಳು ಲಿಪಿ ಕಲಿಕಾ ಕಾರ್ಯಾಗಾರ, ತುಳು ಸಂಶೋಧನಾ ಸಾಧ್ಯತೆಗಳ ವಿಚಾರ ಸಂಕಿರಣ ನಡೆಯಲಿದೆ. ಅಪರಾಹ್ನ 2 ರಿಂದ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ ಸಮಾರೋಪ ಭಾಷಣ ಮಾಡುವರು. ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರುವರು. ತುಳು ಕವಿತೆ, ಪಾಡ್ದನ, ಜನಪದ ನೃತ್ಯ ಮೊದಲಾದ ಸಾಂಸ್ಕøತಿಕ ವೈವಿಧ್ಯಗಳು ನಡೆಯಲಿವೆ.
      ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಯಶಸ್ವಿಗೆ ರಚಿಸಲಾದ ವಿವಿಧ ಸಮಿತಿಗಳ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು ಮಾಹಿತಿ ನೀಡಿದರು. ಅಕಾಡೆಮಿ ಕಾರ್ಯದರ್ಶಿ ವಿಜಯಕುಮಾರ್ ಪಾವಳ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರನ್ ಪಾಡಿ, ಬಿ.ಕೆ.ಸುಕುಮಾರ್, ಭಾರತೀ ಬಾಬು, ಜಯಂತಿ ಸುವರ್ಣ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಶಂಕರ ಸ್ವಾಮಿ ಕೃಪಾ, ಬಿ.ಎಂ.ಗಂಗಾಧರ, ರಾಜೀವಿ ಕೆ., ರವೀಂದ್ರ ರೈ ಮಲ್ಲಾವರ, ಎಂ.ಎಂ.ಗಂಗಾಧರನ್, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸಚಿತ ರೈ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries