ಕಾಸರಗೋಡು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ 109 ನೇ ವರ್ಷದ ಸಂಕೀರ್ತನಾ ಸಪ್ತಾಹ ನಿನ್ನೆ ವೈಭವದಿಂದ ಪ್ರಾರಂಭ ಗೊಂಡಿತು.
ಬೆಳಗ್ಗೆ ಪ್ರಾರ್ಥನೆ ನಡೆದು ಶ್ರೀ ವರದರಾಜ ವೆಂಕಟರಮಣ ದೇವರಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಆ ಆರತಿಯಿಂದ ಸಪ್ತಾಹ ದೀಪದ ಪ್ರಜ್ವಲನೆಯನ್ನು ದೇಗುಲದ ಪ್ರಧಾನ ಅರ್ಚಕ ಕೆ.ವೇದವ್ಯಾಸ ಭಟ್ ಅವರು ಮಾಡಿದರು. ಕೀರ್ತನಗಾರರು ಗಣಪತಿ ಸ್ತುತಿಯೊಂದಿಗೆ ಭಜನೆ ಪ್ರಾರಂಭ ಮಾಡಿ ವಿಠಲ ರಕುಮಾಯಿ ದೇವರ ಮೂರ್ತಿ ಹಾಗೂ ಪ್ರಜ್ವಲನೆ ಮಾಡಲಾದ ದೀಪದೊಂದಿಗೆ ಕ್ಷೇತ್ರಕ್ಕೆ ಪ್ರದಕ್ಷಿಣೆ ಬಂದು ದೇವರನ್ನು ಸಪ್ತಾಹ ಮಂಟಪದಲ್ಲಿ ಮತ್ತು ದೀಪವನ್ನು ರಂಗಶಿಲೆಯಲ್ಲಿ ಪ್ರತಿಷ್ಠೆ ಮಾಡಲಾಯಿತು. 7 ದಿನ ಗಳ ಕಾಲ ನಿರಂತರ ಭಜನೆ ರಂಗಶಿಲೆಯಲ್ಲಿ ಊರ ಪರವೂರ ಭಜನಾ ತಂಡದಿಂದ ನಡೆಯಲಿದ್ದು ಡಿಸೆಂಬರ್ 9ರಂದು ಭಜನಾ ಮಂಗಲೋತ್ಸವ ನಡೆಯಲಿದೆ.
ಸಪ್ತಾಹ ಸಮಾರಂಭದ ದಿನಗಳಲ್ಲಿ ಶ್ರೀ ದೇವರಿಗೆ ರಂಗಪೂಜೆ, ಕಳಭಾಲಂಕಾರ ಸೇವೆ, ಲಕ್ಷ ಹೂವಿನ ಪೂಜೆ, ಹುಲ್ಪೆ ಸೇವೆ ಸೇರಿದಂತೆ ಅನೇಕ ವಿಶೇಷ ಸೇವಾ ಸಮರ್ಪಣೆ ಸಲ್ಲಿಸಲಾಗುವುದು. ಡಿ.8ರಂದು ಗೀತಾ ಜಯಂತಿ ನಿಮಿತ್ತ ಸಭಾ ಕಾರ್ಯಕ್ರಮ ನಡೆಯಲಿದ್ದು ನಡೆಸಲಾದ ಅನೇಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು.
ಡಿಸೆಂಬರ್ 9 ರಂದು ಭಜನಾ ಮಂಗಲೋತ್ಸವ. ಮುಕ್ಕೋಟಿ ದ್ವಾದಶಿಯ ಪರ್ವ ದಿನವಾದ ಅಂದು ಬೆಳಗ್ಗೆ ವರದರಾಜ ವೆಂಕಟರಮಣ ದೇವರ ಲಾಲಕಿ ಉತ್ಸವ, ಮಡೆಸ್ನಾನ, ವಿಠಲ ರಕುಮಾಯಿ ದೇವರು, ಹಾಗೂ ದೀಪದ ಕ್ಷೇತ್ರ ಪ್ರದಕ್ಷಿಣೆ, ಸಂಪೆÇ್ರೀಕ್ಷಣೆ, ಸಾನಿಧ್ಯ ಹವನ, ಫಲಾವಳಿ ಏಲಂ, ಮಹಾಪೂಜೆ ನಡೆದು ಭೂರೀ ಸಮಾರಾಧನೆ ನಡೆಯುವುದು.