ಕಾಸರಗೋಡು: ಡಿಸಂಬರ್ ತಿಂಗಳ 26 ರಂದು ನಡೆಯುವ ಸೂರ್ಯಗ್ರಹಣ ವೀಕ್ಷಿಸಲು ಕಾಸರಗೋಡು ಶಿಕ್ಷಣ ಜಿಲ್ಲೆಯ ಗಿಪ್ಟೆಡ್ ಚಿಲ್ಡ್ರನ್ ಪೆÇ್ರೀಗ್ರಾಂನಲ್ಲಿ ಸದಸ್ಯರಾದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಬೇತಿ ನೀಡಲಾಯಿತು.
ಸೂರ್ಯಗ್ರಹಣ ವೀಕ್ಷಿಸಲು ಶಿಕ್ಷಣ ಇಲಾಖೆ ವತಿಯಿಂದ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಡಿಇಒ ನಂದಿಕೇಶನ್ ತರಬೇತಿ ಯೋಜನೆಯನ್ನು ಉದ್ಘಾಟಿಸಿದರು. ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ನಿರ್ದೇಶಕ ಎ.ಪಿ.ಭಟ್ ಅವರ ನೇತೃತ್ವದಲ್ಲಿ ವೀಕ್ಷಣ ಕನ್ನಡಕಗಳನ್ನು ತಯಾರಿಸಲಾಗಿದೆ. ಗಿಫ್ಟ್ ಚಿಲ್ಡ್ರನ್ ಶಿಕ್ಷಣ ಜಿಲ್ಲಾ ಕೋ-ಆರ್ಡಿನೇಟರ್ ಪಿ.ಎಸ್.ಸಂತೋಷ್ ಕುಮಾರ್, ಬಿ.ಕೃಷ್ಣವೇಣಿ, ಎ.ಜಯರಾಜನ್, ಅತುಲ್ ಭಟ್ ಮೊದಲಾದವರು ನೇತೃತ್ವ ನೀಡಿದರು.