ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶ್ರೀ ಮಹಿಷಮರ್ಧಿನಿ ಅಮ್ಮನವರ ಶ್ರೀ ಭೂತಬಲಿ ಉತ್ಸವವು ಬುಧವಾರ ಪೂರ್ವಾಹ್ನ ಪ್ರಾರಂಭವಾಗಿದ್ದು ಗಣಪತಿ ಹೋಮ, ಬಲಿವಾಡುಕೂಟಕ್ಕೆ ಭಕ್ತರಿಂದ ಬಲಿವಾಡು ಸಂಗ್ರಹ ನಡೆಯಿತು.
ಬೆಳಗ್ಗೆ ಪಾವೂರು ದೈವಸ್ಥಾನದಿಂದ ಶ್ರೀ ಧೂಮಾವತಿ ದೈವದ ಭಂಡಾರ ಆಗಮನ ಉಪ್ಪಳ ತಿಂಬರ ಶ್ರೀ ಲಕ್ಷ್ಮೀ ಮಹಿಳಾ ಭಜನ ಸಂಘದವರಿಂದ ಭಜನೆ ನಡೆಯಿತು. ಕ್ಷೇತ್ರ ತಂತ್ರಿಗಳಾದ ವರ್ಕಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ನವಕಾಭಿಷೇಕ ಹಾಗೂ ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ದೀಪಾರಾಧನೆಯ ನಂತರ ಗಂಗಾಧರ ಮಾರಾರ್ ಮತ್ತು ಬಳಗದವರಿಂದ ತಾಯಂಬಕ ಮತ್ತು ಗೋಸಾಡ ಶ್ರೀ ಮಹಿಷಮರ್ಧಿನಿ ಭಜನ ಸಂಘದವರಿಂದ ಭಜನೆ ಜರಗಿತು. ರಾತ್ರೆ ಕುಣಿತ ಭಜನೆಯ ಮೂಲಕ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ಕುಣಿತ ಭಜನಾ ಸಂಘದವರು ಗಮನಸೆಳೆದರು. ಶ್ರೀಭೂತಬಲಿ ಉತ್ಸವ ಅನ್ನಸಂತರ್ಪಣೆ ಜರಗಿತು.
ಇಂದು (ಡಿ.12)ಬೆಳಗ್ಗೆ 10 ಗಂಟೆಗೆ ದರ್ಶನಬಲಿ ಬಟ್ಲು ಕಾಣಿಕೆ, ರಾಜಾಂಗಣ ಪ್ರಸಾದ, ನವಕಾಭಿಷೇಕ ಹಾಗೂ ಮಂತ್ರಾಕ್ಷತೆ, ಮಧ್ಯಾಹ್ನ 12 ಗಂಟೆಗೆ ಶ್ರೀ ಧೂಮಾವತಿ ದೈವದ ತಂಬಿಲ, ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8 ಗಂಟೆಗೆ ಮಲ್ಲಮೂಲೆ ತರವಾಡು ಮನೆಯಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಭಂಡಾರ ಆಗಮನ, 8.30ಕ್ಕೆ ಕಾರ್ತಿಕ ಪೂಜೆ, ಪ್ರಸಾದ ವಿತರಣೆ, ದೈವಗಳ ತೊಡಂಙಲ್. ಡಿ.13ರಂದು ಪೂರ್ವಾಹ್ನ 7.30ಕ್ಕೆ ರಕ್ತೇಶ್ವರಿ ದೈವದ ಕೋಲ, 10 ಗಂಟೆಗೆ ನಾಗದೇವರಿಗೆ ತಂಬಿಲ, ಮಧ್ಯಾಹ್ನ 12 ಗಂಟೆಗೆ ಮಾಟೆ ಮನೆತನದವರ ವತಿಯಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಕೋಲ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ.