ಕಾಸರಗೋಡು: ರಾಜ್ಯ ಸರ್ಕಾರದ ಉದ್ಯಮೀಕರಣದ ಚುರುಕುತನ ಅಂಗವಾಗಿ ಉದ್ದಿಮೆ ವಾಣಿಜ್ಯ ಇಲಾಖೆ ವತಿಯಿಂದ ಕೃಷಿ ವಿಜ್ಞಾನ ಕೇಂದ್ರದ ಸಹಕಾರದೊಂದಿಗೆ ಸೂಕ್ಷ್ಮ್ಮ-ಕಿರು-ಮಧ್ಯಕಾಲ ಉದ್ದಿಮೆ ಘಟಕ ಆರಂಭಿಸುವವರಿಗಾಗಿ ಡಿ.11ರಂದು ಬೆಳಗ್ಗೆ 10 ಗಂಟೆಯಿಂದ ಟೆಕ್ನಾಲಜಿ ಕ್ಲಿನಿಕ್ ನಡೆಯಲಿದೆ.
ಕಾಸರಗೋಡು ಚೌಕಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸುವರು. ಐ.ಸಿ.ಎ.ಆರ್.ಕೆ.ವಿ.ಕೆ. ನಿರ್ದೇಶಕಿ ಡಾ.ಅನಿತಾ ಕರುಣ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಉದ್ದಿಮೆ ಕೇಂದ್ರ ಪ್ರಧಾನ ಪ್ರಬಂಧಕ ಸಿ.ಒ.ರಂಜಿತ್ ಪ್ರಧಾನ ಭಾಷಣ ಮಾಡುವರು. ತೆಂಗಿನಕಾಯಿ, ಹಲಸಿನ ಕಾಯಿ, ಮಾವಿನಕಾಯಿ, ಗೇರುಹಣ್ಣು, ಅನನಾಸು ಇತ್ಯಾದಿಗಳ ಸಂಸ್ಕರಣೆ, ಮೌಲ್ಯವರ್ಧನೆಯ ಉತ್ಪನ್ನಗಳನ್ನಾಗಿಸುವ ಕ್ರಮ, ಆಹಾರ ಸುರಕ್ಷೆ, ಬ್ಯಾಂಕ್ ಸಾಲ ಕ್ರಮಗಳು ಇತ್ಯಾದಿಗಳಲ್ಲಿ ತರಗತಿ ನಡೆಯಲಿದೆ. ಕೃಷಿ ವಿಜ್ಞಾನ ಕೇಂದ್ರ, ಸಿ.ಪಿ.ಸಿ.ಆರ್.ಐ., ಆಹಾರ ಸುರಕ್ಷೆ ಇಲಾಖೆ, ಉದ್ದಿಮೆ ಇಲಾಖೆ ಸಹಿತ ಸಂಸ್ಥೆಗಳ ಪರಿಣತರು ತರಗತಿ ನಡೆಸುವರು.