ಪೆರ್ಲ:ಕೇರಳ ವಿದ್ಯಾಭ್ಯಾಸ ಇಲಾಖೆ ನಿರ್ದೇಶನದಂತೆ 'ಪ್ರತಿಭೆಗಳೊಂದಿಗೆ ವಿದ್ಯಾರ್ಥಿಗಳು' ಕಾರ್ಯಕ್ರಮದ ಭಾಗವಾಗಿ ಸ್ವರ್ಗ ಸ್ವಾಮಿ ವಿವೇಕಾನಂದ ಅನುದಾನಿತ ಶಾಲೆಯ ಮಕ್ಕಳು ಶಾಲೆಯ ಹಿರಿಯ ವಿದ್ಯಾರ್ಥಿ, ಸಂಶೋಧಕ ಪ್ರಸನ್ನ ಕುಮಾರ್ ಬೈರಡ್ಕ ಅವರ ಮನೆಗೆ ಭೇಟಿ ನೀಡಿದರು.
ಪ್ರಾಥಮಿಕ ತರಗತಿಯಿಂದಲೇ ವಿಜ್ಞಾನ, ಸಂಶೋಧನೆಯಲ್ಲಿ ಆಸಕ್ತಿ ಹೊಂದಿ ವೈಜ್ಞಾನಿಕ ತತ್ವದ ಆಧಾರದಲ್ಲಿ ಕಾರ್ಯವೆಸಗುವ ಉಪಕರಣಗಳನ್ನು ತಯಾರಿಸುವುದರಲ್ಲಿ ನಿಸ್ಸೀಮರಾದ ಪ್ರಸನ್ನ ಕುಮಾರ್, 'ಯಾಕೆ' ಎನ್ನುವ ಪ್ರಶ್ನೆ ಸಂಶೋಧನಾ ಚಟುವಟಿಕೆಗಳಿಗೆ ಪ್ರೇರಣೆ ನೀಡಿತು.21ನೇ ಶತಮಾನದಲ್ಲಿ ತಂತ್ರಜ್ಞಾನದ ಅರಿವು ಅತೀ ಅಗತ್ಯ.ಗೂಗಲ್, ಇಂಟರ್ನೆಟ್ ಮೂಲಕ ಸಿಗುವ ಮಾಹಿತಿ ಆಧರಿಸಿ ಸಂಶೋಧನೆ ಚಟುವಟಿಕೆಗಳಲ್ಲಿ ತೆuಟಿಜeಜಿiಟಿeಜಡಗಿದಲ್ಲಿ ಹಲವು ರೀತಿಯ ಸಂಶೋಧನೆ, ಆವಿಷ್ಕಾರಗಳನ್ನು ಮಾಡಬಹುದು.ಸಮಯವನ್ನು ಹಾಳು ಮಾಡದೆ ನಿರಂತರ ಚಟುವಟಿಕೆ, ಸಂಶೋಧನಾ ಪ್ರವೃತ್ತಿ ಇದ್ದಲ್ಲಿ ಸಂಶೋಧನೆಯಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿದರು.
ವಿದ್ಯಾರ್ಥಿಗಳು ಹೂಗುಚ್ಛ ನೀಡಿ ಗೌರವಿಸಿದರು.ಶಿಕ್ಷಕ ಸಚ್ಚಿದಾನಂದ ಎಸ್, ಮಿಥುನ್ ವಿ.ಆರ್, ನಿಕ್ಷಿತಾ ಬೈರಡ್ಕ ನೇತೃತ್ವ ವಹಿಸಿದರು.