ಕುಂಬಳೆ: ಬಿಜೆಪಿಯ ಹಿರಿಯ ನೇತಾರರಾಗಿದ್ದ ಮಡಿಕೈ ಕಮ್ಮಾರನ್ ಅವರ ಎರಡನೇ ವರ್ಷದ ಸಂಸ್ಮರಣೆ ಕುಂಬಳೆಯಲ್ಲಿರುವ ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯಾಲಯದಲ್ಲಿ ಗುರುವಾರ ನಡೆಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ವಿನೋದನ್ ಕೆ. ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿದರು. ಬಿಜೆಪಿ
ಜಿಲ್ಲಾ ಸಮಿತಿ ಸದಸ್ಯ ರಮೇಶ್ ಭಟ್, ಕಾರ್ಯಾಲಯ ಕಾರ್ಯದರ್ಶಿ ಶಶಿ ಕುಂಬಳೆ, ಕೇಶವ ನಾಯಕ್, ಪಂಚಾಯತಿ ಸದಸ್ಯ ಹರೀಶ್ ಗಟ್ಟಿ ಉಪಸ್ಥಿತರಿದ್ದರು.