ಮುಳ್ಳೇರಿಯ: ಕುಂಬಳೆ ಸೀಮೆಯ ಅಡೂರು ಕ್ಷೇತ್ರ ಕಾರ್ಯವ್ಯಾಪ್ತಿಯ ಬೆಳ್ಳಿಪ್ಪಾಡಿ ನಡುಬೆಟ್ಟು ಉಳ್ಳಾಕುಳು ಧೂಮಾವತಿ -ರಾಜನ್ ದೈವ ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆಯುವ ದೈವಗಳ ನೇಮೋತ್ಸವ ಸಂಪನ್ನಗೊಂಡಿತು.
ಕಾಣಿಯೂರು ಸ್ಥಾನದಲ್ಲಿ ಒಂದು ಕುಂದ ನಲ್ವತ್ತು ದೈವವಗಳ ಆರಾಧನೆ, ಉಳ್ಳಾಕುಳು ದೈವಗಳ ಮೂಲಸ್ಥಾನ ಕಲ್ಲಡ್ಕದಲ್ಲಿ ತಂಬಿಲ ಸೇವೆ, ಪಂಜುರ್ಲಿ ದೈವಕ್ಕೆ ತಂಬಿಲ ಸೇವೆ, ಬದಿಬಾಗಿಲಿನಲ್ಲಿ ಧೂಮಾವತಿ ದೈವಕ್ಕೆ ತಂಬಿಲ, ಮಡಿವಾಳ ಪಡ್ಪುನಲ್ಲಿ ವ್ಯಾಘ್ರ ಚಾಮುಂಡಿ ದೈವಕ್ಕೆ ತಂಬಿಲ ಸೇವೆ ನಡೆಯಿತು.
ಗೊನೆ ಕಡಿದು ಬಳಿಕ ಕುಂಟಾರು ತಾಂತ್ರಿಕ ಸದನದ ಬ್ರಹ್ಮಶ್ರೀ ಶ್ರೀಧರ ತಂತ್ರಿ ಮತ್ತು ಸಂಗಡಿಗರಿಂದ ಗಣಹೋಮ - ಕ್ಷೇತ್ರ ಶುದಿ ್ಧ- ತಂಬಿಲ ಸೇವೆ ಜರಗಿತು. ಬೆಳ್ಳಿಪ್ಪಾಡಿ ನಡುಬೆಟ್ಟು ಸ್ಥಾನದಲ್ಲಿ ಉಳ್ಳಾಕುಳು ದೂಮಾವತಿ-ರಾಜನ್ ದೈವಗಳಿಗೆ ವೈಭವದ ನೇಮೋತ್ಸವ ಜರಗಿತು. ಉತ್ಸವದ ಅಂಗವಾಗಿ ಬೆಳ್ಳಿಪ್ಪಾಡಿ ಶ್ರೀ ಶಾರದಾಂಬ ಭಜನಾ ಸಮಿತಿಯವರಿಂದ ಭಜನಾ ಸೇವೆ ನಡೆಯಿತು.
ಕ್ಷೇತ್ರದ ಪವಿತ್ರ ಪಾಣಿ ಬೆಳ್ಳಿಪ್ಪಾಡಿ ರಾಮಕೃಷ್ಣ ಶಗ್ರಿತ್ತಾಯ ಸ್ವಾಗತಿಸಿದರು. ಬೆಳ್ಳಿಪ್ಪಾಡಿ ಸದಾಶಿವ ರೈ ದೈವೀಕ ಕಾರ್ಯಕ್ರಮಗಳನ್ನು ನಿರೂಪಿಸಿದರು. ನಾಲ್ಕು ವರ್ಗ ಕುಟುಂಬ ಪ್ರಮುಖರಾದ ಬೆಳ್ಳಿಪ್ಪಾಡಿ ನಾಗಪ್ಪ ಗೌಡ, ಬೆಳ್ಳಿಪ್ಪಾಡಿ ಸದಾನಂದ ರೈ ಬಿ.ಯಚ್.ಹುಕ್ರಪ್ಪ ಮಾಸ್ತರ್, ಬಾಳೆಕೋಡಿ ತೇಜಕುಮಾರ್, ಹಳೆಮನೆ ಜತ್ತಪ್ಪ ಗೌಡ, ಹಳೆಮನೆ ವಿವೇಕ ಗೌಡ, ಬೆಳ್ಳಿಪ್ಪಾಡಿ ತೋಟ ಚಂದ್ರಶೇಖರ ಗೌಡ, ಬೆಳ್ಳಿಪ್ಪಾಡಿ ಹೊಸಮನೆ ಬಾಲಕೃಷ್ಣ ಗೌಡ, ಕೊಳಂಬೆ ಬಾಬು ಗೌಡ, ತೋಟ ಶಿವರಾಮ ಗೌಡ, ಹಳೆಮನೆ ಕುಂಞಣ್ಣ ಗೌಡ, ಬೆಳ್ಳಿಪ್ಪಾಡಿ ಹಳೆಮನೆ ಕುಶಾಲಪ್ಪ ಗೌಡ, ಬಿ.ಹೆಚ್. ಜಯರಾಮ ಗೌಡ, ಬಿ. ಹೆಚ್.ಕೌಶಿಕ್, ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ದೈವಗಳ ಶ್ರೀಗಂಧ - ಅರಶಿನ ಪ್ರಸಾದ ವಿತರಣೆಯಾಗಿ ಸಹಸ್ರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.