ಪೆರ್ಲ :ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು, ನಿಸರ್ಗ ಬೆದ್ರಂಪಳ್ಳ ಹಾಗೂ ಕಾಸರಗೋಡು ಸರ್ಕಾರಿ ಕಾಲೇಜು ಹಾಗೂ ಪೆರ್ಲ ನಾಲಂದ ಕಾಲೇಜಿನ ಎನ್ನೆಸ್ಸೆಸ್ ಘಟಕ ಹಾಗೂ ಭೂಮಿತ್ರಸೇನಾ ಕ್ಲಬ್ ಗಳ ಸಹಕಾರದೊಂದಿಗೆ ಬೆದ್ರಂಪಳ್ಳ ನಿಸರ್ಗದಲ್ಲಿ ನಡೆದ ಜೈವ ವೈವಿಧ್ಯ ಶಿಬಿರದಲ್ಲಿ ನೆಹರು ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಸುಬ್ರಮಣ್ಯ ಪ್ರಸಾದ್ ಅವರು ಶಿಬಿರದ ಸಂಯೋಜಕ ಮೊಹಮ್ಮದ್ ಅಲಿಯವರು ನೆಟ್ಟು ಬೆಳೆಸಿದ ಸಸ್ಯಗಳಲ್ಲಿನ ಔಷಧೀಯ ಗುಣಗಳ ಬಗ್ಗೆ ಮಾಹಿತಿ ನೀಡಿದರು.
ಡಾ. ಸುಬ್ರಮಣ್ಯ ಪ್ರಸಾದ್ ಮಾಹಿತಿ ನೀಡಿ ಮಾತನಾಡಿ ಪ್ರಕೃತಿಯಲ್ಲಿ ಉಪಯೋಗ ಶೂನ್ಯ ಸಸ್ಯಗಳು ಅಲಭ್ಯ. ಪ್ರತಿಯೊಂದು ಸಸ್ಯಗಳೂ ಒಂದೊಂದು ರೀತಿಯಲ್ಲಿ ಮಾನವನಿಗೆ ಪ್ರಯೋಜನಕಾರಿಯಾಗಿದೆ. ಹಸುರೆಲೆ ಸಸ್ಯಗಳು ಅಂಗಾರಾಮ್ಲವನ್ನು ಸ್ವೀಕರಿಸಿ, ಮನುಷ್ಯನಿಗೆ ಪ್ರಾಣ ವಾಯು ಒಕ್ಸಿಜನ್ ನೀಡುತ್ತದೆ. ಜೊತೆಗೆ ಹೆಚ್ಚಿನ ಎಲ್ಲಾ ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿದೆ. ಆದುದರಿಂದ ಸಸ್ಯಗಳ ಪ್ರಾಮುಖ್ಯತೆ ಅರಿಯದೇ ವಿನಾಕಾರಣ ಸಸ್ಯಗಳ ನಾಶದಲ್ಲಿ ತೊಡಗುವುದು ಸರಿಯಲ್ಲ ಎಂದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಕಾಲೇಜಿನ ಉಪನ್ಯಾಸಕ, ಶಿಬಿರದ ಸಂಯೋಜಕ ಮೊಹಮ್ಮದ್ ಅಲಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.