ಬದಿಯಡ್ಕ : ಪುಂಡೂರು ದಾಮೋದರ ಪುಣಿಂಚಿತ್ತಾಯ ಪ್ರತಿಷ್ಠಾನದ 2019ನೇ ಸಾಲಿನ ದಾಮೋದರ ಪುಣಿಂಚಿತ್ತಾಯ ಸಂಸ್ಮರಣೆ ಹಾಗೂ ಸನ್ಮಾನ ಕಾರ್ಯಕ್ರಮವು ಈಚೆಗೆ ಬೆಳ್ಳೂರು ರಾಮಚಂದ್ರ ಪುಣಿಂಚಿತ್ತಾಯರ ಮನೆಯಲ್ಲಿ ಇತ್ತೀಚೆಗೆ ನಡೆಯಿತು.
ಉಳಿಯತ್ತಾಯ ವಿಷ್ಣು ಅಸ್ರ ಅಧ್ಯಕ್ಷತೆ ವಹಿಸಿದ್ದರು. ಪುರುಷೋತ್ತಮ ಪುಣಿಂಚಿತ್ತಾಯರು ಸಂಸ್ಮರಣಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ಮುಖ್ಯ ಶಿಕ್ಷಕ ಕುಂಡಲ ವಿಷ್ಣು ಆಚಾರ್ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಫಲ ನೀಡಿ ಗೌರವಿಸಲಾಯಿತು. ವಿದ್ವಾಂಸ ಬೆಳ್ಳಿಗೆ ನಾರಾಯಣ ಮಣಿಯಾಣಿ ಅಭಿನಂದನಾ ಭಾಷಣ ಮಾಡಿದರು. ರಶ್ಮಿ ಪುಣಿಂಚಿತ್ತಾಯ ಪ್ರಾರ್ಥಿಸಿದರು. ಗುರುರಂಜನ್ ಪುಣಿಂಚಿತ್ತಾಯ ವಂದಿಸಿದರು. ಡಾ. ಬೇ ಸಿ ಗೋಪಾಲಕೃಷ್ಣ ಭಟ್ ನಿರೂಪಿಸಿದರು. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಲತಾ ಉದಯ ಅಮ್ಮಣ್ಣಾಯ ಮತ್ತು ಬಳಗದವರಿಂದ ಪುಣಿಂಚಿತ್ತಾಯ ಭಕ್ತಿಗಾನ ಭಜನೆ ನಡೆಯಿತು. ಭಜನೆಯಲ್ಲಿ ವಾಮದೇವ ಪುಣಿಂಚಿತ್ತಾಯ, ರಾಮಚಂದ್ರ ಪುಣಿಂಚಿತ್ತಾಯ, ಗರೀಶ ಭಟ್ ನುಳಿಯಾಲ, ಅಮೃತಾ ಅಡಿಗ ಪಾಣಾಜೆ, ವಂದನಾ ಮಾಲೆಂಕಿ, ಹರಿನಾರಾಯಣ ನಡುವಂತಿಲ್ಲಾಯ ಮುನಿಯೂರು ಭಾಗವಹಿಸಿದ್ದರು. ಅನೇಕ ಮಂದಿ ಪುಣಿಂಚಿತ್ತಾಯ ಅಭಿಮಾನಿಗಳು ಭಾಗವಹಿಸಿದ್ದರು.