ಮಂಜೇಶ್ವರ: ಕರ್ನಾಟಕ ಯಕ್ಷಗಾನ ಅಕಾಡೆಮಿ ಕೊಡಮಾಡುವ 2018ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ, ಗೌರವ ಪ್ರಶಸ್ತಿ ಹಾಗೂ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಡಿ. 9 ರಂದು ಸೋಮವಾರ ಸಂಜೆ 4.30ರಿಂದ ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಜರಗಲಿದೆ.
ಗಡಿನಾಡು ಕಾಸರಗೋಡಿನ ಹೆಮ್ಮೆಯ ಕಲಾವಿದರುಗಳಾದ ಧರ್ಮಸ್ಥಳ ಮೇಳದ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ ಹಾಗೂ ದೂರದ ಮಹಾರಾಷ್ಟ್ರದ ಪೂನದಲ್ಲಿ ನೆಲೆಸಿ ಯಕ್ಷಗಾನ ಸಂಘಟನೆ ಹಾಗೂ ತರಬೇತಿಯನ್ನು ಕಳೆದ ನಲುವತ್ತು ವರ್ಷಗಳಿಂದ ನಡೆಸುತ್ತಾಮಂದಿರುವ ಮೀಯಪದವು ಸಮೀಪದ ಮದಂಗಲ್ಲು ಆನಂದ ಭಟ್ ಅವರಿಗೆ ಪ್ರತಿಷ್ಠಿತ ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಪ್ರದಾನವಾಗಲಿದೆ.
ಶ್ರೀ ಬಂಗಾರಾಚಾರಿ ಕಬ್ಬಳ್ಳಿಯವರಿಗೆ ಪಾರ್ತಿಸುಬ್ಬ ಪ್ರಶಸ್ತಿ ಪ್ರದಾನ ಮಾಡಲಿದ್ದು, ಹಿರಿಯ ಹಿಮ್ಮೇಳ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ , ರಾಮರಾಜೇ ಅರಸ್, ಗುಡ್ಮಿ ಸದಾನಂದ ಐತಾಳ್, ಎಸ್ ಸಿ ಜಗದೀಶ್, ಕೆ ಮೋಹನ್ ಅವರಿಗೆ ಅಕಾಡೆಮಿಯ ಗೌರವ ಪ್ರಶಸ್ತಿ ನೀಡಲಿದ್ದು, ಗಡಿನಾಡ ಕಲಾವಿದರ ಜತೆಯಲ್ಲಿ ಮೋಹನ ಬೈಪಡಿತ್ತಾಯ, ಮಣೂರು ನರಸಿಂಹ ಮಧ್ಯಸ್ಥ, ನಿತ್ಯಾನಂದ ಹೆಬ್ಬಾರ್, ಕೃಷ್ಣಮಾಣಿ ಅಗೇರ, ಭಾಸ್ಕರ ಜೋಶಿ ಶಿರಳಗಿ, ಎಸ್ ಪಿ ಮುನಿ ಕೆಂಪಯ್ಯ, ಶ್ರೀ ನಾರಾಯಣ ಸ್ವಾಮಿ, ಡಾ.ಪಿ ಶಾತಾರಾಮ ಪ್ರಭುಗಳಿಗೆ ಯಕ್ಷಸಿರಿ ಪ್ರದಾನವಾಗಲಿದೆ.
2018ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಯಡಿ ಡಾ.ಎನ್ ನಾರಾಯಣ ಶೆಟ್ಟಿಯವರ ಛಂದಸ್ಪತಿ, ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ಪ್ರಸಂಗಾಭರಣ, ಡಾ.ಕೆ ಎಂ ರಾಘವ ನಂಬಿಯಾರ್ ಅವರ ರಂಗವಿದ್ಯೆಯ ಹೊಲಬು ಕೃತಿಗೆ ಬಹುಮಾನ ಪ್ರದಾನವಾಗಲಿದೆ.
ಕರ್ನಾಟಕ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಸಿ ಟಿ ರವಿ ಯವರು ಸಭಾ ಅಧ್ಯಕ್ಷತೆ ವಹಿಸಿ ಪಾರ್ತಿಸುಬ್ಬ ಪ್ರಶಸ್ತಿ ಪಾಧಾನ ಮಾಡಲಿದ್ದು, ವಿಧಾನ ಪರಿಷತ್ ಉಪ ಸಭಾಪತಿ ಎನ್ ಎಲ್ ಧರ್ಮೇಗೌಡ, ಜಿಲ್ಲಾ ಪಂಚಾಯತ್ ವಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಎಸ್ ರಂಗಪ್ಪ, ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ, ಸಂಸದ ಜೈರಾಮ್ ರಮೇಶ್, ಸಂಸದ ಪ್ರಜ್ವಲ್ ರೇವಣ್ಣ, ಶಾಸಕರುಗಳಾದ ಅಯನೂರು ಮಂಜುನಾಥ, ಎಂಪಿ ಕುಮಾರ ಸ್ವಾಮಿ, ಡಿ ಎಸ್ ಸುರೇಶ್, ಎಂ ಕೆ ಪ್ರಾಣೇಶ್, ಬೆಳ್ಳಿ ಪ್ರಕಾಶ್,ಟಿ ಡಿ ರಾಜೇ ಗೌಡ, ಎಸ್.ಎಲ್. ಬೋಜೇ ಗೌಡ, ತಾಲೂಕು ಪಂಚಾಯತ್ ಅಧ್ಯಕ್ಷ ಜಯಣ್ಣ, ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಅಶ್ವತಿ ಎಸ್, ಹರೀಶ್ ಪಾಂಡೆ ಪೋಲೀಸ್ ಅಧೀಕ್ಷಕರು, ಕನ್ನಡ ಸಂಸ್ಕøತಿ ಇಲಾಖಾ ಚಿಕಮಗಳೂರು ಜಿಲ್ಲಾ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಶಿವರುದ್ರಪ್ಪ ಸಮಾರಂಭದಲ್ಲಿ ಭಾಗವಹಿಸಲಿದ್ದು ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಗಾನ ವೈವಿಧ್ಯ ಹಾಗೂ ಶರಸೇತು ಬಂಧನ ಯಕ್ಷಗಾನ ಬಯಲಾಟ ಜರಗಲಿದೆ ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ.