ಮಂಜೇಶ್ವರ: ಕೇರಳ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್(ಕೆಎಸ್‍ಟಿಎ) ಇದರ 2019-20 ನೇ ಸಾಲಿನ 29 ನೇ ರಾಜ್ಯ ಸಮ್ಮೇಳನದ ಅಂಗವಾಗಿ ಉಪಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದ ತನಕ ಅಧ್ಯಾಪಕರಿಗಾಗಿ ಕಲಾ ಕ್ರೀಡಾಕೂಟ ಸ್ಪರ್ಧೆ ಏರ್ಪಡಿಸಲಾಗಿದೆ. ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ಇಂದು(ಡಿ.8) ಉಪ್ಪಳ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಪರ್ಧೆಗಳು ಜರಗಲಿದೆ. ಸ್ಪರ್ಧೆಯಲ್ಲಿ ಕಲಾ ಸಾಹಿತ್ಯ ಸ್ಪರ್ಧೆಗಳಾದ ಕವಿತಾಲಾಪನೆ, ಏಕಪಾತ್ರಾಭಿನಯ, ಲಘು ಸಂಗೀತ, ಕಥಾ ರಚನೆ,ಕವಿತಾ ರಚನೆ, ಪೆನ್ಸಿಲ್ ಡ್ರಾಯಿಂಗ್, ಕಲರ್ ಡ್ರಾಯಿಂಗ್, ಕಾರ್ಟೂನ್, ಮಾಪಿಳ್ಳ ಪಾಟ್ಟ್, ಜನಪದ ಗೀತೆ, ಸಮೂಹ ಜನಪದಗೀತೆ, ಒಪ್ಪನ, ತಿರುವಾದಿರ, ಮಾಗರ್ಂಕಳಿ, ಬೀದಿ ನಾಟಕ, ಮಿಮಿಕ್ರಿ, ಕ್ರೀಡಾ ಸ್ಪರ್ಧೆಗಳಾದ ಬ್ಯಾಡ್ಮಿಂಟನ್ ಸಿಂಗಲ್, ಫುಟ್ಬಾಲ್, ವಾಲಿಬಾಲ್, ಕ್ರಿಕೆಟ್, ಅತ್ಲೆಟಿಕ್‍ಗಳಲ್ಲಿ ಓಟ 100,200,400,800, ರಿಲೇ, ಶಾಟ್ ಪುಟ್ ಮೊದಲಾದವುಗಳನ್ನು ಏರ್ಪಡಿಸಲಾಗಿದೆ. ಉಪಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಬಹುದು. ಜಿಲ್ಲಾ ಮಟ್ಟದ ಪ್ರಥಮ ಸ್ಥಾನ ಪಡೆದವರಿಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ರಾಜ್ಯ ಮಟ್ಟದ ಸಾಂಸ್ಕøತಿಕ ಸ್ಪರ್ಧೆ ಪಾಲಕ್ಕಾಡ್ ನಲ್ಲಿ ಹಾಗೂ ಕ್ರೀಡಾಕೂಟ ಕೊಲ್ಲಂ ಜಿಲ್ಲೆಯಲ್ಲಿ ಡಿಸೆಂಬರ್ ನಲ್ಲಿ ಜರಗಲಿದೆ. ಅಧ್ಯಾಪಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.
ಕೆ.ಎಸ್.ಟಿ.ಎ ವತಿಯಿಂದ ಅಧ್ಯಾಪಕರ ಕಲಾ ಮೇಳ
0
ಡಿಸೆಂಬರ್ 08, 2019