HEALTH TIPS

ಭಾರತೀಯ ಇತಿಹಾಸ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಾಜ್ಯಪಾಲರ ವಿರುದ್ಧ ಭಾರಿ ಪ್ರತಿಭಟನೆ-ಮೂಕಪ್ರೇಕ್ಷಕರಾದ ಪೊಲೀಸರು!

     
          ಕಣ್ಣೂರು: ಕಣ್ಣೂರು ವಿಶ್ವ ವಿದ್ಯಾಲಯ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಭಾರತೀಯ ಚರಿತ್ರೆ ಕಾಂಗ್ರೆಸ್ ಉದ್ಘಾಟನೆಗೆ ಆಗಮಿಸಿದ ಕೇರಳ ರಾಜ್ಯಪಾಲ ಆರಿಫ್‍ಮಹಮ್ಮದ್ ಖಾನ್ ಅವರಿಗೆ ಯೂತ್ ಕಾಂಗ್ರೆಸ್ ಹಾಗೂ ಕೆಎಸ್‍ಯು ವಿದ್ಯಾರ್ಥಿಗಳಿಂದ ಭಾರಿ ಪ್ರತಿಭಟನೆ ಎದುರಿಸಬೇಕಾಯಿತು.
      ಸಮಾರಂಭ ಆರಂಭಗೊಳ್ಳುತ್ತಿದ್ದಂತೆ ಸಭೆಯಲ್ಲಿ ಆಸೀನರಾಗಿದ್ದ ಕೆಲವರು ಪೌರತ್ವ ಕಾನೂನಿಗೆ ಸಂಬಂಧಿಸಿ ರಾಜ್ಯಪಾಲರ ನಿಲುವಿನ ಬಗ್ಗೆ ಪ್ಲೇಕಾರ್ಡ್ ಎತ್ತಿಹಿಡಿದು ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿದ್ದರು. ಸಂವಿಧಾನ ಹಾಗೂ ಕಾನೂನಿಗೆ ವಿರುದ್ಧವಾದ ಯಾವುದೇ ನಿಲುವನ್ನೂ ಅಂಗೀಕರಿಸಲಾಗದು. ಚರಿತ್ರೆ ಕಾಂಗ್ರೆಸ್ ರಾಜಕೀಂiÀiರಹಿತ ವಿಷಯವಾಗಿದ್ದು, ಇಲ್ಲಿ ರಾಜಕೀಯ ಎಳೆದುತರಲು ಯತ್ನಿಸಿದಲ್ಲಿ, ಇದಕ್ಕೆ ಉತ್ತರ ನೀಡದಿರಲು ಸಾಧ್ಯವಿಲ್ಲ. ರಾಜಭವನದ ಎದುರು ಹಾಗೂ ಕೋಯಿಕ್ಕೋಡಿನಲ್ಲಿ ಪೌರತ್ವ ತಿದ್ದುಪಡಿ ಕಾನೂನಿನ ವಿರುದ್ಧ ತನಗೆದುರಾಗಿ ಪ್ರತಿಭಟನೆ ನಡೆಸಿದವರನ್ನು ಈ ಬಗ್ಗೆ ಸಮಗ್ರ ಸಂವಾದಕ್ಕೆ ಆಹ್ವಾನಿಸಿದ್ದರೂ, ಯಾರೊಬ್ಬರೂ ಇದಕ್ಕೆ ತಯಾರಾಗಿಲ್ಲ ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ತಿಳಿಸಿದರು. ಸಂವಿಧಾನವನ್ನು ರಕ್ಷಿಸುವುದಾಗಿ ಹಾಗೂ ಇದಕ್ಕೆ ಬೇಕಾಗಿ ಧ್ವನಿಯೆತ್ತುವುದಾಗಿ ಪ್ರತಿಜ್ಞೆ ಕೈಗೊಂಡು ರಾಜ್ಯಪಾಲ ಹುದ್ದೆ ಸ್ವೀಕರಿಸಿದ್ದೇನೆ. ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ತನ್ನ ನಿಲುವಿಗೆ ಬದ್ಧನಾಗಿದ್ದೇನೆ. ಇದನ್ನು ಎದುರಿಸುವವರಿಗೆ ಅವರ ನಿಲುವು ಸರಿಯಾಗಿರಬಹುದು. ಯಾವುದೇ ವಿಷಯವನ್ನು ಚರ್ಚೆಯ ಮೂಲಕ ಬಗೆಹರಿಸಲು ಸಾಧ್ಯವಿದೆ. ಇದಕ್ಕಾಗಿ ಚರ್ಚೆಗೆ ಆಹ್ವಾನಿಸಿದರೂ, ಯಾರೂ ಚರ್ಚೆಗೆ ಮುಂದಾಗದೆ ಹಿಂಸಾತ್ಮಕ ಪ್ರತಿಭಟನೆಯ ಮಾರ್ಗ ಅನುಸರಿಸುತ್ತಿರುವವರಿಗೆ ಏನೂ ಹೇಳಲಾಗದು. ಸಮಾರಂಭದ ವೇದಿಕೆ ಎದುರು ನಡೆದ ಪ್ರತಿಭಟನೆ ಬಗ್ಗೆ ಪ್ರತಿಕ್ರೆಯೆ ವ್ಯಕ್ತಪಡಿಸಿದ ರಾಜ್ಯಪಾಲರು, ನಿಮಗೆ ಪ್ರತಿಭಟಿಸುವ ಹಕ್ಕಿದ್ದರೆ, ತನಗೆ ಮಾತನಾಡುವ ಹಕ್ಕು ಇರುವುದಾಗಿ ತಿಳಿಸಿ ತಮ್ಮ ಭಾಷಣ ಮುಂದುವರಿಸಿಲು ಮುಂದಾಗುತ್ತಿದ್ದಂತೆ ಸಭಿಕರಲ್ಲಿ ಕೆಲವರು ತಮ್ಮ ಪ್ರತಿಭಟನೆ ಕೂಗು ಹೆಚ್ಚಿಸಿದರು. ಈ ಮಧ್ಯೆ ಪ್ರತಿಭಟನೆಯ ಮೂಲಕ ತನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿ, ಭಾಷಣ ಮುಗಿಸಿದರು.
              ಪ್ರತಿಭಟನೆ ಪೂರ್ವನಿಯೋಜಿತ?:
      ಕಣ್ಣೂರು ವಿಶ್ವ ವಿದ್ಯಾನಿಲಯದಲ್ಲಿ ಭಾರತೀಯ ಚರಿತ್ರೆ ಕಾಂಗ್ರೆಸ್ ಸಮಾರಂಭದಲ್ಲಿ ನಡೆದ ಪ್ರತಿಭಟನೆ ಪೂರ್ವನಿಯೊಝಿತವಾಗಿತ್ತು ಎಂಬುದಕ್ಕೆ ಸಭಾಂಗಣದೊಳಗೆ ಮೊದಲೇ ತಯಾರಿಸಿ ಸಂಗ್ರಹಿಸಲಾಗಿದ್ದ ಪ್ಲೇಕಾರ್ಡ್ ಹಾಗೂ ಕರಿಪತಾಕೆ ಸಾಕ್ಷಿಯಾಗಿತ್ತು. ಪ್ರತಿಭಟನಾಕಾರರಲ್ಲಿ ಜೆಎನ್‍ಯು, ಆಲಿಘಡ್, ಜಾಮಿಯ-ಮಿಲಿಯ ಸಹಿತ ವಿವಿಧ ವಿಶ್ವ ವಿದ್ಯಾಲಯಗಳಿಂದ ಆಗಮಿಸಿದವರೂ ಒಳಗೊಂಡಿದ್ದರು. ರಜ್ಯದ ಪ್ರಥಮ ಪ್ರಜೆ ರಾಜ್ಯಪಾಲರ ವಿರುದ್ಧ ಭಾರಿ ಪ್ರಮಾಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದರೂ, ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ರಾಜ್ಯಸಭಾ ಸದಸ್ಯರೊಬ್ಬರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ತೆಗೆಯದಂತೆ ತಡೆಯೊಡ್ಡಿದ್ದರು.
          ನಿನ್ನೆ ಕರ್ನಾಟಕ ಸಿಎಂ, ಇಂದು ಕೇರಳ ರಾಜ್ಯಪಾಲ....:
     ಖಾಸಗಿ ಭೇಟಿಗೆ ಕೇರಳಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಕಣ್ಣೂರಿನಲ್ಲಿ ಒಂದು ತಂಡ ತಡೆದು, ಸಿಎಂ ಸಂಚರಿಸುತ್ತಿದ್ದ  ಕಾರಿಗೆ ಧ್ವಜ ಬಿಗಿದ ಸಲಾಕೆಯಿಂದ ಬಡಿದು ದಾಂಧಲೆ ನಡೆಸಿದ್ದರೂ, ಇಲ್ಲಿನ ಪೊಲೀಸರು ಪ್ರತಿಭಟನಾಕಾರರಲ್ಲಿ ತೋರಿದ್ದ ಮೃದು ಧೋರಣೆಯನ್ನು ಶನಿವಾರ ಕೇರಳದ ರಾಜ್ಯಪಾಲರ ವಿರುದ್ಧ ಪ್ರತಿಭಟಿಸಿದವರ ವಿರುದ್ಧವೂ ತೋರಿಸುವ ಮೂಲಕ ತಾವು ಪ್ರತಿಭಟನಾಕಾರರ ಜತೆಗಿದ್ದೇವೆ ಎಂಬುದನ್ನು ಸಾಬೀತುಪಡಿಸಿದ್ದರು.
               ಪ್ರಜಾಪ್ರಭುತ್ವ ವಿರೋಧಿ ನಿಲುವು-ಬಿಜೆಪಿ:
      ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ನಡೆಯುತ್ತಿರುವ ಹೋರಾಟದ ಮರೆಯಲ್ಲಿ ಕೇರಳ ಸಹಿತ ದೇಶಾದ್ಯಂತ ಅರಾಜಕತೆ ಉಂಟುಮಾಡಿ, ಇದರ ಲಾಭ ಪಡೆಯಲು ಕಾಂಗ್ರೆಸ್, ಸಿಪಿಎಂ ಸಹಿತ ಪ್ರತಿಪಕ್ಷಗಳು ಶ್ರಮಿಸುತ್ತಿರುವುದಾಗಿ ಬಿಜೆಪಿ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್ ಆರೋಪಿಸಿದ್ದಾರೆ. ಕಾನೂನಿನ ಬಗ್ಗೆ ಆತಂಕ, ಲೋಪಗಳಿದ್ದಲ್ಲಿ ಚರ್ಚೆಗೆ ಸಿದ್ಧರಾಗುವುದು ಅಥವಾ ಪರಮೋಚ್ಛ ನ್ಯಾಯಾಲಯದಲ್ಲಿ ಇದನ್ನು ಪ್ರಶ್ನಿಸುವುದು ಬಿಟ್ಟು, ವೋಟ್‍ಬ್ಯಾಂಕ್ ರಾಜಕೀಯಕ್ಕಾಗಿ ಜನರನ್ನು ಬೀದಿಗಿಳಿಸಿ ಹಿಂಸಾಚಾರಕ್ಕೆ ಪ್ರಚೋದಿಸುವುದರಿಂದ ಎರಡೂ ರಂಗಗಳು ವಿಮುಖರಾಗಬೇಕು. ಕಣ್ಣೂರಿನಲ್ಲಿ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳದೆ ಪೊಲೀಸರು ಪ್ರಜಾಪ್ರಭುತ್ವ ವಿರೋಧಿ ಧೋರಣೆ ತಳೆದಿದ್ದಾರೆ. ಪೊಲೀಸರು ಸಿಪಿಎಂನ ಆಜ್ಞಾನುವರ್ತಿಗಳಾಗಿರುವುದಕ್ಕೆ ಇದು ಸಾಕ್ಷಿಯಾಘಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries